ಭಾರತದ ಎನ್‌ಎಸ್‌ಜಿ ಪ್ರವೇಶಕ್ಕೆ ಚೀನಾ ತಡೆ: ಪಾಕ್ ವಿಶ್ವಾಸ
Update: 2016-04-15 23:48 IST
ಇಸ್ಲಾಮಾಬಾದ್, ಎ. 15: ಅಮೆರಿಕದ ಬೆಂಬಲವನ್ನು ಹೊಂದಿದ್ದರೂ, ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಪ್ರವೇಶಿಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ, ಯಾಕೆಂದರೆ ಅದರ ಸದಸ್ಯತ್ವವನ್ನು ಚೀನಾ ವಿರೋಧಿಸುತ್ತದೆ ಎಂದು ವಿಶ್ವಸಂಸ್ಥೆಗೆ ಜಿನೇವದಲ್ಲಿ ಪಾಕಿಸ್ತಾನದ ಮಾಜಿ ಖಾಯಂ ಪ್ರತಿನಿಧಿ ಝಮೀರ್ ಅಕ್ರಮ್ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಪರಮಾಣು ವ್ಯವಸ್ಥೆ ಕುರಿತ ವಿಚಾರ ಸಂಕಿರಣವೊಂದರಲ್ಲಿ ಅವರು ಮಾತನಾಡುತ್ತಿದ್ದರು.
''ಭಾರತ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವ ಸಾಧ್ಯತೆ ಅಕ್ಷರಶಃ ಸೊನ್ನೆ ಎಂದು ಅಕ್ರಮ್ ಹೇಳಿದ್ದಾರೆ'' ಎಂದು ಪಾಕ್ ದೈನಿಕ 'ಡಾನ್' ವರದಿ ಮಾಡಿದೆ.