ನೇಣು ಬಿಗಿದು ಆತ್ಮಹತ್ಯೆ
Update: 2016-04-15 23:53 IST
ಕಾಸರಗೋಡು,ಎ.15: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಬೋಳುಕಟ್ಟೆಯ ನಿವಾಸಿ ಸೆಬಾಸ್ಟಿಯನ್ (42) ಆತ್ಮ ಹತ್ಯೆಗೈದ ವ್ಯಕ್ತಿ. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಮೂಲತ: ಇಡುಕ್ಕಿ ನಿವಾಸಿಯಾಗಿದ್ದ ಸೆಬಾಸ್ಟಿಯನ್ ಕೆಲ ವರ್ಷಗಳಿಂದ ಬದಿಯಡ್ಕದಲ್ಲಿ ಪತ್ನಿ ಮಕ್ಕಳ ಜೊತೆ ವಾಸವಿದ್ದು, ಇಲೆಕ್ಟ್ರಿಕಲ್ ಹಾಗೂ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು.
ದಾಂಪತ್ಯ ಕಲಹವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.