ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬೊಲೆರೊ ವಾಹನ ಕಳವು
Update: 2016-04-15 23:56 IST
ಬಂಟ್ವಾಳ, ಎ.15: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್‌ರ ಬೊಲೆರೊ ವಾಹನವನ್ನು ಗುರುವಾರ ರಾತ್ರಿ ಕಾವಳಕಟ್ಟೆಯಿಂದ ಕಳವುಗೈದ ಘಟನೆ ಸಂಭವಿಸಿದೆ.
ಸಾಲಿಯಾನ್ ರಾತ್ರಿ ಕಾವಳಕಟ್ಟೆ ದೈವಸ್ಥಾನದ ಸಮೀಪ ತಮ್ಮ ವಾಹ ನವನ್ನಿರಿಸಿ ಧರ್ಮಸ್ಥಳಕ್ಕೆ ತೆರಳಿದ್ದರು. ತಡರಾತ್ರಿ ಸುಮಾರು 2:30 ಗಂಟೆಯ ವೇಳೆಗೆ ಮರಳಿ ಬಂದಾಗ ನಿಲ್ಲಿಸಿದ್ದ ಬೊಲೆರೊ ವಾಹನ ಕಾಣೆಯಾಗಿತ್ತು. ಘಟನೆ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.