ದಸಂಸದಿಂದ ಎ.18ರಂದು ಅಂಬೇಡ್ಕರ್ ಜಯಂತಿ
ಮಂಗಳೂರು, ಎ.15: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದ.ಕ. ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜನ್ಮ ದಿನಾಚರಣೆ ಎ.18ರಂದು ಪೂರ್ವಾಹ್ನ 11 ಗಂಟೆಗೆ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ಅಂದು ಬೆಳಗ್ಗೆ 10 ಗಂಟೆಗೆ ನಗರದ ಬಾವುಟಗುಡ್ಡೆಯಿಂದ ಪುರಭವನದವರೆಗೆ ಜನ ಕಲಾಮೇಳ ಜಾಥಾ ನಡೆಯಲಿದೆ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಯಾಗಿ ರುವರು. ಮೈಸೂರು ಅಷ್ಟಾಂಗ ಮಾರ್ಗ ಧ್ಯಾನ ಕೇಂದ್ರದ ಭಂತೇ ಭೋದಿದತ್ತ ಮಾರ್ಗದರ್ಶನ ನೀಡುವರು. ದಸಂಸ ರಾಜ್ಯ ಸಂಚಾಲಕ ವೆಂಕಟ ಗಿರಿಯಯ್ಯ ಉದ್ಘಾಟಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ರಘು ಕೆ.ಎಕ್ಕಾರು, ಮುಖಂಡರಾದ ಶಿವಪ್ಪ ಅಟ್ಟೋಳೆ ಸವಣೂರು, ಲಕ್ಷ್ಮಣ್ ಕಾಂಚನ್, ಎಂ.ಭಾಸ್ಕರ್ ಉಪಸ್ಥಿತರಿದ್ದರು.