ಶ್ರೀನಗರದಲ್ಲಿ ಕರ್ಪ್ಯೂ ಮುಂದುವರಿಕೆ
ಶ್ರೀನಗರ, ಎ.16: ಭದ್ರತಾ ಪಡೆಗಳ ಗುಂಡೇಟಿಗೆ ಹತ್ತೊಂಬತ್ತರ ಹರೆಯದ ಯುವಕನೊಬ್ಬ ಬಲಿಯಾದ ಬಳಿಕ ಶ್ರೀನಗರ, ಉತ್ತರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ಪ್ಯೂ ಹೇರಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಕಳೆದ ಮಂಗಳವಾರದಿಂದ ಈ ತನಕ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದವರ ಸಂಖ್ಯೆ ಐದಕ್ಕೇರಿದೆ. ನಾಟುನ್ಸಾ ಗ್ರಾಮದಲ್ಲಿ ಸೈನಿಕರ ಜೊತೆ ನಾಗರಿಕರು ಘರ್ಷಣೆಗಿಳಿದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಿತ್ತು.
ಸೇನೆಯ ಗುಂಡೇಟಿಗೆ ಅರಿಫ್ ಹುಸೈನ್ ದಾರ್ ಎಂಬ ಯುವಕ ಬಲಿಯಾದರು. ಇತರ ನಾಲ್ವರು ಗಾಯಗೊಂಡಿದ್ದರು.
ಲಭ್ಯವಾದ ಮೂಲಗಳ ಘರ್ಷಣೆಯಲ್ಲಿ ಈ ವರೆಗೆ 40 ಸೈನಿಕರು ಸೇರಿದಂತೆ60 ಮಂದಿ ಗಾಯಗೊಂಡಿದ್ದಾರೆ.
ಬಾರಮುಲ್ಲಾ ನಗರ, ಪುಲ್ವಾಮಾ ನಗರದಲ್ಲಿ ನಿಷೇದಾಝ್ಷೆ ಮುಂದುವರಿದಿದೆ. ಕಾಶ್ಮೀರ ಕಣಿವೆಯಲ್ಲಿ ಇಂಟನೆಟ್ , ದೂರವಾಣಿ ಸಂಪರ್ಕವನ್ನು ಕಡಿದು ಹಾಕಲಾಗಿದೆ.
ಗೋಲಿಬಾರ್‌ನಲ್ಲಿ ಯುವಕ ಸತ್ತಿರುವುದನ್ನು ಪ್ರತಿಭಟಿಸಿ ಸೈಯಿದ್ ಗಿಲಾನಿ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಉಗ್ರವಾದಿ ಬಣವು ಶನಿವಾರ ಕಾಶ್ಮೀರ್ ಬಂದ್‌ಗೆ ಕರೆ ನೀಡಿದೆ. ಯುವತಿಯೊಬ್ಬಳನ್ನು ಚುಡಾಯಿಸಿದ ಪರಿಣಾಮ ಕಳೆದ ನಾಲ್ಕು ದಿನಗಳಿಂದ ಕುಪ್ವಾರಾ ಜಿಲ್ಲೆ ಅಕ್ಷರಶಃ ಕುದಿಯುತ್ತಿದೆ.
ಗಲಭೆಪೀಡಿತ ಶ್ರೀನಗರದಲ್ಲಿ ಶನಿವಾರ ನಡೆಯಬೇಕಿದ್ದ ಶಾಲಾ. ಕಾಲೇಜುಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ರ‍್ವೇಲ್ವೆ ಸಂಚಾರವನ್ನು ನಿಲ್ಲಿಸಲಾಗಿದೆ.