×
Ad

ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಸ್ಥಾನ ತ್ಯಜಿಸಿದ ಧೋನಿ

Update: 2016-04-16 14:11 IST

ಹೊಸದಿಲ್ಲಿ, ಎ.16: ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಆಗಿದ್ದ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ  ಬಳಿಕ ಅವರ ಪತ್ನಿ ಸಾಕ್ಷಿ ಧೋನಿ ಕೂಡ ಆಮ್ರಪಾಲಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಆಮ್ರಪಾಲಿ ಗ್ರೂಪ್ ನಡೆಸುತ್ತಿರುವ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ  ಟೀಮ್‌ ಇಂಡಿಯಾ ನಾಯಕ ಧೋನಿ ರಾಯಭಾರಿಯಾಗಿದ್ದರು.  ಅವರ ಪತ್ನಿ ಸಾಕ್ಷಿ ನಿರ್ದೇಶಕರುಗಳ ಮಂಡಳಿಯಲ್ಲಿ ಸದಸ್ಯೆಯಾಗಿದ್ದರು.
2009 ರಲ್ಲಿ ಆಮ್ರಪಾಲಿ ಗ್ರೂಪ್ ನೋಯ್ದಾ ಮತ್ತು ದೆಹಲಿಯ ಉಪ ನಗರಗಳಲ್ಲಿ ಸಫೈರ್ ಎಂಬ ಅಪಾರ್ಟ್ ಮೆಂಟ್ ನಿರ್ಮಿಸಿ ಸುಮಾರು 1 ಸಾವಿರ ಫ್ಲ್ಯಾಟ್ ಗಳನ್ನು  ಮಾರಾಟ ಮಾಡಿತ್ತು. ಆದರೆ ಫ್ಲ್ಯಾಟ್‌ಗಳನ್ನು ಪಡೆದ ಮಂದಿಗೆ ಮೂಲಭೂತ ಅಗತ್ಯವಾಗಿರುವ ರಸ್ತೆ, ಎಲೆಕ್ಚ್ರಿಕಲ್, ಮತ್ತಿತರರು ಸೌಲಭ್ಯಗಳನ್ನು ನೀಡಿರಲಲಿಲ್ಲ. ಅಪಾರ್ಟ್‌‌ಮೆಂಟ್‌ ನಿವಾಸಿಗಳ ಮನವಿಯಂತೆ ಧೋನಿ ಆಮ್ರಪಾಲಿ ಗ್ರೂಪ್ ಆಡಳಿತ ಮಂಡಳಿ ಯನ್ನು ಭೇಟಿ ಮಾಡಿ ಅಪಾರ್ಟ್‌‌ಮೆಂಟ್‌ನ ನಿವಾಸಿಗಳಿಗೆ ಅಗತ್ಯದ ಸೌಲಭ್ಯವನ್ನು ಒದಗಿಸಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಆಮ್ರಪಾಲಿ ಬಿಲ್ಡರ್ಸ್ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಿಂದ ಅಸಮಾಧಾನಗೊಂಡಿರುವ ಧೋನಿ  ಆಮ್ರಪಾಲಿ ಗ್ರೂಪ್ ನ ಬ್ಯ್ರಾಂಡ್ ಅಂಬಾಸಿಡರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News