ಜೀವಬೆದರಿಕೆ: ದೂರು
Update: 2016-04-16 14:46 IST
ಉಳ್ಳಾಲ, ಎ. 16: ವ್ಯಕ್ತಿಯೊಬ್ಬರಿಗೆ ಬೈಕ್‌ನಲ್ಲಿ ಬಂದ ತಂಡವೊಂದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆಯೊಡ್ಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲ ನಗರ ಸಭೆಯ ಕಚೇರಿ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಮೊಗವೀರಟ್ನ ನಿವಾಸಿ ದೀಕ್ಷಿತ್ ಎಂಬವರು ಉಳ್ಳಾಲ ಬಸ್ ತಂಗುದಾಣ ರಸ್ತೆಯಾಗಿ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ದೀಕ್ಷಿತ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ದೀಕ್ಷಿತ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.