ಮೋದಿ-ಕೇಜ್ರಿವಾಲ್ ವಾರಣಾಸಿ ವಾರ್ ಕುರಿತ ಸಾಕ್ಷ್ಯಚಿತ್ರಕ್ಕೆ ‘ನಿರ್ಬಂಧ’
ಮುಂಬೈ : ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ನಾಯಕ ಹಾಗೂ ಪ್ರಸಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡುವೆ ನಡೆದ ಚುನಾವಣಾ ಸಮರದ ಮೇಲೆ ನಿರ್ಮಿಸಲಾದ ಕಮಲ್ ಸ್ವರೂಪ್ ನಿರ್ದೇಶನದ ಸಾಕ್ಷ್ಯಚಿತ್ರ‘ದಿ ಬ್ಯಾಟಲ್ ಆಫ್ ಬನಾರಸ್’ ಗೆಪ್ರಮಾಣಪತ್ರ ನೀಡಲು ನಿರಾಕರಿಸಿದ ಸೆನ್ಸಾರ್ ಮಂಡಳಿಯಪರಿವೀಕ್ಷಣಾ ಸಮಿತಿಯನಿರ್ಧಾರವನ್ನುಫಿಲ್ಮ್ ಸರ್ಟಿಫಿಕೇಟ್ ಅಪಲ್ಲೇಟ್ ಟ್ರಿಬ್ಯೂನಲ್ ಎತ್ತಿ ಹಿಡಿದಿದೆ.
ಈಗಿನ ಸನ್ನಿವೇಶದಲ್ಲಿ ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ನ್ಯಾಯಾಲಯದ ಕದ ತಟ್ಟುವ ವಿನಹ ಅನ್ಯ ಮಾರ್ಗವಿಲ್ಲದಂತಾಗಿದೆ.
‘‘ಚಿತ್ರವು ಸಂಪೂರ್ಣವಾಗಿ ಹಲವಾರು ರಾಜಕೀಯ ಪಕ್ಷಗಳವರು ನೀಡಿದ ದ್ವೇಷಪೂರಿತ/ಪ್ರಚೋದನಾತ್ಮಕ ಭಾಷಣಗಳಿಂದಕೂಡಿರುವ ಕಾರಣ ಅದಕ್ಕೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿನಿರಾಕರಿಸಿರುವುದು ಸಮರ್ಥನೀಯವೆಂದು ಚಿತ್ರ ವೀಕ್ಷಿಸದ ನಂತರ ನಾವು ಕಂಡುಕೊಂಡೆವು. ಅದು ಜನರನ್ನು ಜಾತಿ ಹಾಗೂಸಮುದಾಯದ ಆಧಾರದ ಮೇಲೆ ವಿಭಜಿಸಲು ಯತ್ನಿಸುತ್ತಿದೆ ಹಾಗೂ ಕೆಲವು ವ್ಯಕ್ತಿಗಳ ವಿರುದ್ಧ ಅವಹೇಳನಾತ್ಮಕ ಹೇಳಿಕೆಗಳಿಂದ ಕೂಡಿದೆ. ಚಿತ್ರದ ಬಿಡುಗಡೆಮತೀಯ ಸೌಹಾರ್ದತೆಯನ್ನು ಕೆಡಿಸಬಹುದಲ್ಲದೆ ವಿವಿಧ ಜಾತಿ, ಧರ್ಮಗಳ ಜನರ ನಡುವೆಯೂ ದ್ವೇಷ ಹುಟ್ಟಿಸಬಹುದು. ಈ ಮನವಿಯನ್ನುರದ್ದುಪಡಿಸಲಾಗಿದೆ,’’ಎಂದು ಟ್ರಿಬ್ಯೂನಲ್ ತನ್ನ ತೀರ್ಮಾನದಲ್ಲಿ ತಿಳಿಸಿದೆ.