ಹಂದ್ವಾರ್ ಲೈಂಗಿಕ ಕಿರುಕುಳ ಸಂತ್ರಸ್ತೆ ಶಾಲಾ ಬಾಲಕಿ 3 ದಿನದಿಂದ ಪೊಲೀಸ್ ವಶದಲ್ಲಿ
ಶ್ರೀನಗರ : ಶ್ರೀನಗರದಿಂದ69 ಕಿ.ಮಿ. ದೂರವಿರುವ ಹಂದ್ವಾರ ಪಟ್ಟಣದಲ್ಲ್ಲಿ ಎಪ್ರಿಲ್ 12ರಂದು ಸೈನಿಕನೊಬ್ಬನಿಂದ ಲೈಂಗಿಕ ಕಿರುಕುಳಕ್ಕೊಳಗಾದ 16 ವರ್ಷದ ಶಾಲಾ ಬಾಲಕಿ ಕಳೆದ ಮೂರು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾಳೆಂದು, ದಿ ಲೇಡೀಸ್ ಫಿಂಗರ್.ಕಾಂ ವರದಿ ಮಾಡಿದೆ.
ಎಪ್ರಿಲ್ 12ರಂದು ಬಾಲಕಿ ಸಾರ್ವಜನಿಕ ಶೌಚಾಲಯವೊಂದನ್ನು ಉಪಯೋಗಿಸುತ್ತಿದ್ದಾಗ ಘಟನೆ ನಡೆದಿದೆಯೆಂದು ಹೇಳಲಾಗಿ. ಘಟನೆ ನಡೆದ ಕೂಡಲೇ ಹಿಂಸಾತ್ಮಕ ಪ್ರತಿಭಟನೆಗಳು ನಡೆದ ಪರಿಣಾಮಪ್ರತಿಭಟನೆಯನನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ಯುವಕನೊಬ್ಬನೂ ಸೇರಿದಂತೆ ಮೂವರು ಸೇನೆಯ ಗುಂಡಿಗೆ ಬಲಿಯಾದರು.
ಈತನ್ಮಧ್ಯೆ ಸಂತ್ರಸ್ತೆಗೆ ಏನಾಯಿತು ಎಂದು ತಿಳಿಯುವ ಪ್ರಯತ್ನ ನಡೆದಾಗ ಆಕೆ ಇನ್ನೂ ಪೊಲೀಸ್ ಕಸ್ಟಡಿಯಲ್ಲಿದ್ದಾಳೆಂದೂ ಆಕೆಯ ಕುಟುಂಬ ಸದಸ್ಯರಿಗೂ ಆಕೆಯನ್ನು ಭೇಟಿಯಾಗಲು ಬಿಟ್ಟಿಲ್ಲವೆಂದೂ ತಿಳಿದು ಬಂದಿದೆ.
ಮೇಲಾಗಿಸಂತ್ರಸ್ತೆ ತನ್ನ ಮೇಲೆ ನಡೆದ ಲೈಂಗಿಕ ಹಲ್ಲೆಯಲ್ಲಿ ಪೊಲೀಸ್ /ಸೇನೆಯ ಪಾತ್ರವೇನೂ ಇಲ್ಲವೆಂದು ಹಾಗೂ ಈ ಘಟನೆಗೆ ಕೆಲವು ‘ಸ್ಥಳೀಯ ಹುಡುಗರು’ ಕಾರಣವೆಂದು ಹೇಳುವ ವೀಡಿಯೋವೊಂದು ಹರಿದಾಡುತ್ತಿದೆ. ಮೇಲಾಗಿ ಎಪ್ರಿಲ್ 14ರ ರಾತ್ರಿ ಒಂದು ಗಂಟೆಗೆ ಸಂತ್ರಸ್ತೆಯ ತಂದೆಯನ್ನು ಠಾಣೆಗೆ ಬರ ಹೇಳಲಾಯಿತು. ಈಗಾಗಲೇ ಕಂಗಾಲಾಗಿರುವ ಕುಟುಂಬದ ಮುಖ್ಯಸ್ಥನಿಗೆ ರಾತ್ರಿ ಇಷ್ಟು ಹೊತ್ತಿಗೆ ಠಾಣೆಗೆ ಬರ ಹೇಳಿದರೆ ಆತನ ಸ್ಥಿತಿ ಏನಾಗಬಹುದೆಂದು ಯಾರಾದರೂ ಊಹಿಸಬಹುದು. ಅಂದಿನಿಂದ ಹುಡುಗಿಯ ತಂದೆ ಹಾಗೂ ಮಾವ ಕೂಡ ಕಾಣೆಯಾಗಿದ್ದಾರೆ.
ಲೈಂಗಿಕ ಪ್ರಕರಣದ ಸಂತ್ರಸ್ತರು ಧೈರ್ಯದಿಂದ ದೂರನ್ನು ದಾಖಲಿಸಬೇಕೆಂದು ಹೇಳಲಾಗುತ್ತಿದೆ. ಆದರೆ ಕೆಲವೊಮ್ಮೆ ದೂರು ದಾಖಲಿಸಿದವರ ಗತಿಯೇನಾಗುತ್ತದೆಯೆಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತಿದೆ.