×
Ad

ಮಂಜೇಶ್ವರ ವಿಧಾನ ಸಭಾ ಕ್ಷೇತ್ರ : ಯು.ಡಿ.ಎಫ್ ಅಭ್ಯರ್ಥಿ ಗೆಲುವು ಖಚಿತ - ಪಿ.ಎ ಅಶ್ರಫಾಲಿ

Update: 2016-04-16 17:35 IST

ಮಂಜೇಶ್ವರ : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಯು.ಡಿ.ಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪಿ.ಬಿ ಅಬ್ದುಲ್ ರಝಾಕ್ ಗೆಲುವು ಖಚಿತ ಎಂದು ಕೆ.ಪಿ.ಸಿ.ಸಿ ನಿರ್ವಾಹಕ ಸಮಿತಿ ಸದಸ್ಯ ಪಿ.ಎ ಅಶ್ರಫಾಲಿ ಹೇಳಿದ್ದಾರೆ. ಅವರು ಕಿಣಿ ನಿವಾಸದಲ್ಲಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ಸಭೆಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮತ್ತೆ ಉಮ್ಮನ್ ಚಾಂಡಿ ನೇತೃತ್ವದ ಸರಕಾರ ಬರಲಿದೆ ಎಂದ ಅವರು ಇದಕ್ಕೆ ಕಾರ್ಯಕರ್ತರು ಕಟಿಬದ್ದರಾಗಿ ದುಡಿಯುವಂತೆ ಕರೆ ನೀಡಿದರು. ಡಿ.ಸಿ.ಸಿ ಕಾರ್ಯದರ್ಶಿಗಳಾದ ಕೇಶವಪ್ರಸಾದ್ ನಾಣಿಹಿತ್ಲು , ಸುಂದರ ಆರಿಕ್ಕಾಡಿ , ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷೆ ವಿಜಯಲಕ್ಷ್ಮೀ , ಸದಸ್ಯೆ ಫಾತಿಮತ್ ಝುಹರಾ , ಡಿ.ಸಿ.ಸಿ ಸದಸ್ಯ ಸುಧಾಕರ ವರ್ಕಾಡಿ , ಮುಖಂಡರುಗಳಾದ ಪ್ರಶಾಂತಿ, ರಂಜಿತ್ , ಐ.ಆರ್.ಡಿ.ಪಿ ಇಬ್ರಾಹಿಂ, ಕಾಯಿಞ್ಞೆ ಹಾಜಿ ಅರಿಮಲೆ , ಪುತ್ತುಚ್ಚ ಕುಂಜತ್ತೂರು , ಯಾಕೂಬ್ , ನಾಗೇಶ್ ಮಂಜೇಶ್ವರ , ಗುರುವಪ್ಪ, ಮಾಲಿಂಗ , ತಮೀಮ್ , ಝಕರಿಯ್ಯೆ ಮಂಜೇಶ್ವರ , ನಾಯನಾರ್ , ಇರ್ಷಾದ್ ಮಂಜೇಶ್ವರ , ರಝಾಕ್ , ರಫೀಕ್ ಭದ್ರಾವತಿ, ಅರಫಾತ್ , ಮೊದಲಾದವರು ಉಪಸ್ತಿತರಿದ್ದರು. ಮಂಡಲಾಧ್ಯಕ್ಷ ಎಂ.ಜೆ ಕಿಣಿ ಅಧ್ಯಕ್ಷತೆ ವಹಿಸಿದರು. ಕಾಯಿಞ್ಞೆ ಹಾಜಿ ಅರಿಮಲೆ ಸ್ವಾಗತಿಸಿದರು. ಇರ್ಷಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News