×
Ad

ಮುಲ್ಕಿ: 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ - ಸಚಿವ ಆಂಜನೇಯ ಘೋಷಣೆ

Update: 2016-04-16 18:24 IST

ಮುಲ್ಕಿ, ಎ.16: ಕೆರೆಕಾಡು ಭಾಗದ ಗ್ರಾಮ ವಾಸ್ತವ್ಯದಿಂದ ಕೊರಗ ಸಮುದಾಯದ ವಾಸ್ತವ ಚಿತ್ರಣವನ್ನು ಕಂಡಿದ್ದೇನೆ, ಸರಕಾರದ ವತಿಯಿಂದ ಸುಮಾರು ಒಂದು ಕೋಟಿ ರೂ. ವೆಚ್ಚದ ವಿಶೇಷ ಪ್ಯಾಕೇಜನ್ನು ಕೆರೆಕಾಡಿನ ಕೊರಗ ಕಾಲೊನಿಗೆ ಮಮಜೂರು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಅವರು ಮುಲ್ಕಿ ಬಳಿಯ ಕೆರೆಾಡಿನಲ್ಲಿ ಶನಿವಾರ  ಆದಿವಾಸಿಗಳ ಹಾಡಿಗೆ ಸರಕಾರ ಕಾರ್ಯಕ್ರಮದಲ್ಲಿ ಕೆರೆಕಾಡಿನ ಕೊರಗ ಕಾಲೋನಿಯಲ್ಲಿನ ತಮ್ಮ ವಾಸ್ತವ್ಯವನ್ನು ಸಮಾಪ್ತಿಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದರು.

ಕೆರೆಕಾಡಿನ ಕಾಲೋನಿಗೆ ಒಂದು ಎಕರೆ ಪ್ರದೇಶವನ್ನು ಖರೀದಿಸಲು ಗ್ರಾಮ ಪಂಚಾಯತ್‌ಗೆ ತಿಳಿಸಿಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಜಮೀನು ಅಥವಾಡಿಸಿ ಮನ್ನಾ ಸ್ಥಳಗಳ ಬಗ್ಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದ್ದು, ಜಿಲ್ಲೆಯ ಯಾವುದೇ ಭಾಗಗಳಲ್ಲಿರುವ ಖಾಲಿ ಜಮೀನುಗಳನ್ನು ಸರಕಾರವೇಖರೀದಿಸಿ, ಕೊರಗ ಸಮುದಾಯಕ್ಕೆ ಕೃಷಿ ಮತ್ತಿತರ ಚಟುವಟಿಕೆಗಾಗಿ ಉಚಿತವಾಗಿ ಹಸ್ತಾಂತರಿಸುವ ಬಗ್ಗೆ ಶೀಘ್ರವಾಗಿಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.

  ಕೊರಗ ಸಮುದಾಯದ ಆರೋಗ್ಯದ ಸಮಸ್ಯೆಯಿಂದ ಜನಸಂಖ್ಯೆ ಕ್ಷೀಣವಾಗುತ್ತಿದೆ, ಯುವಕರಿಗೆ ಕ್ಯಾಟರಿಂಗ್‌ನಂತಹ ಸಾಮೂಹಿಕ ಸ್ವ ಉದ್ಯೋಗಕ್ಕೆ ಪ್ರೇರಣೆ ಆಗಲು ವಿಶೇಷ ಸಬ್ಸಿಡಿ ಸಾಲ ಯೋಜನೆಯನ್ನು ಮಂಜೂರು ಮಾಡಲಾಗುವುದುಎಂದರು.

 ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ಭೇಟಿ ನೀಡಿ ಮಾತನಾಡಿ, ಜನಪ್ರತಿನಿಧಿಗಳು ಯಾವತ್ತು ಜನರೊಂದಿಗೆ ಇರುವವರು. ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಈ ಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆ ಆದಲಿದೆ ಎಂದರು.

 ಶಾಸಕ ಮೊಯ್ದಿನ್ ಬಾವ ಭೇಟಿ ನೀಡಿ ಮುಂದಿನ ಗ್ರಾಮ ವಾಸ್ತವ್ಯವವನ್ನು ತಮ್ಮ ಕ್ಷೇತ್ರದಲ್ಲಿನ ಮದ್ಯ ಪ್ರದೇಶದಲ್ಲಿ ನಡೆಸಬೇಕು, ಹಾಗೂ ಅತಿ ಹೆಚ್ಚು ಅನುದಾನವನ್ನು ನೀಡಿ ಸಹಕರಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

 ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಉಪಾಧ್ಯಕ್ಷೆ ಸುರೇಖಾ, ತಹಶೀಲ್ದಾರ್ ಇಸಾಕ್ ಮೊಹಮ್ಮದ್, ಸಮಾಜ ಕನ್ಯಾಣ ಇಲಾಖೆಯ ಅಧಿಕಾರಿ ಹೇಮಲತಾ, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಕಾಂಗ್ರೆಸ್‌ನ ಎಚ್.ವಸಂತ ಬೆರ್ನಾರ್ಡ್, ದಲಿತ ಸಂಘಟನೆಯ ಇಸುಕುಮಾರ್, ಮಂಜುನಾಥ್, ಸುರೇಶ್ ಕೆರೆಕಾಡು, ಸ್ಥಳೀಯ ನಾಯಕರು ಇನ್ನಿತರರು ಹಾಜರಿದ್ದರು.

1. ಸಚಿವ ಆಂಜನೇಯನವರು ಬೆಳಗ್ಗೆ 5-10ಕ್ಕೆ ಸ್ಥಳೀಯರೊಂದಿಗೆ ಕೆರೆಕಾಡುಪರಿಸರದಿಂದ ಪುನರೂರು ದೇವಸ್ಥಾನದ ವಾಕಿಂಗ್ ಮಾಡಿದರು.

2. ಕಾಲೋನಿಯ ಎಲ್ಲಾ ಮನೆಗೂ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಕೆಲವೊಂದು ಸಲಹೆ ನೀಡಿದರು.

3. ಕಾಲೋನಿಯ ಮೂಲಭೂತ ಸೌಲಭ್ಯಗಳ ಪ್ಯಾಕೇಜ್‌ನಲ್ಲಿ ಅನುದಾನ ಬಳಸಲು ಸೂಚಿಸಿದರು. 4. ವಾಸ್ತವ್ಯ ಹೂಡಿದ್ದ ಮನೆ ಮಾಲಕಿ ಬೇಬಿ ಹಾಗೂ ಅವರ ಮನೆಯವರಿಂದ ಸಂಪ್ರದಾಯಬದ್ದವಾಗಿ ವಿಶೇಷ ಆತಿಥ್ಯವನ್ನು ಸ್ವೀಕರಿಸಿದರು.

5. ಅಧಿಕಾರಿಗಳಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್‌ನ ಪ್ರಮುಖರ ಲ್ಲಿ ಇಲ್ಲಿ ಉಧ್ಭವಿಸುವ ಸಮಸ್ಯೆಗಳ ಬಗ್ಗೆ ವರದಿ ನೀಡಲು ಸೂಚನೆ ನೀಡಿದರು.

ಮಾಧ್ಯಮಗಳ ಬಗ್ಗೆ ಮೆಚ್ಚುಗೆ..

ತಮ್ಮ ಗ್ರಾಮ ವಾಸ್ತವ್ಯದ ವರದಿಪಡೆಯಲು ಎಲ್ಲಾ ಪತ್ರಿಕೆಗಳನ್ನು ತಿರುವಿಹಾಕಿದ ಸಚಿವರು, ಸಾಮಾಜಿಕ ಕ್ರಾಂತಿ, ಸಾಮರಸ್ಯ ಮತ್ತು ಸಮಾನತೆಯ ಉದ್ದೇಶದಿಂದ ಸಮಸ್ಯೆಗಳನ್ನು ಹುಡುಕುತ್ತಾ ಸರಕಾರವೇ ಜನರೆಡೆಗೆ ದಾವಿಸುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಮಾಡಿರುವುದಾಗಿ ಇದೇ ವೇಳೆ ತಿಳಿಸಿದ ಅವರು, ಪತ್ರಿಕೆಗಳ ವರದಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

  ಕಿನ್ನಿಗೋಳಿ: ತೆಂಗಿನ ಮರದಿಂದ ಬಿದ್ದು ಮ್ರತರಾದ ಪಕ್ಷಿಕೆರೆ ಕಾಪಿಕಾಡ್ ನಿವಾಸಿ ಪೂವಪ್ಪ ಅವರ ಮನೆಗೆ ಸಚಿವರಾದ ಅಂಜನೇಯ ಹಾಗೂ ಅಭಯಚಂದ್ರ ಜೈನ್ ಬೇಟಿ ನೀಡಿದರು, ಮ್ರತ ಪೂವಪ್ಪ ರವರ ಪತ್ನಿ ಪ್ರೇಮ ಅವರಿಗೆ ಸಾಂತ್ವಾನ ನೀಡಿದ್ದು, ತುರ್ತು ಪರಿಹಾರ ಹಣ ನೀಡಿದರು, ಸಚಿವ ಅಂಜನೇಯ ತಮ್ಮ ವಯಕ್ತಿಕ  ನೆಲೆಯಲ್ಲಿ ಧನ ಸಹಾಯ ನೀಡಿದರು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಹಣ ದೊರಕಿಸಿಕೊಡುದಾಗಿ ಭರವಸೆ ನೀಡಿದರು, ಈ ಸಂದರ್ಭ ಶಾಸಕ ಮೊಯಿದ್ದಿನ್ ಭಾವ, ತಹಶೀಲ್ದಾರ್ ಮಹಮದ್ ಇಸಾಕ್, ಸ್ಥಳೀಯ ಜನಪ್ರತಿನಿಧಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News