×
Ad

ಹರ್ಭಜನ್ ಯಾವಾಗ ಬೇಕಾದರೂ ವಿಲ್ಲಾ ತೆಗೆದುಕೊಳ್ಳಲಿ

Update: 2016-04-16 18:39 IST

ಹೊಸದಿಲ್ಲಿ, ಎ. 16: ರಿಯಲ್ ಎಸ್ಟೇಟ್ ಕಂಪೆನಿ ಅಮ್ರಪಾಲಿಯ ಬ್ರ್ಯಾಂಡ್ ರಾಯಭಾರಿ ಹುದ್ದೆಯಿಂದ ಮಹೇಂದ್ರ ಸಿಂಗ್ ಧೋನಿ ಕೆಳಗಿಳಿದರೂ ಅದಕ್ಕೆ ಸಂಬಂಧಿಸಿದ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 

ಧೋನಿ ರಾಯಭಾರಿ ಸ್ಥಾನ ಬಿಟ್ಟ ಕೂಡಲೇ ಟ್ವೀಟ್ ಮಾಡಿದ ಹರ್ಭಜನ್ ಸಿಂಗ್ " ಧೋನಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. 2011 ರಲ್ಲಿ ವಿಶ್ವಕಪ್ ಗೆದ್ದ ನಮ್ಮ ತಂಡಕ್ಕೆ ವಿಲ್ಲಾ ಬಹುಮಾನ ನೀಡುವುದಾಗಿ ಘೋಷಿಸಿ ಬಳಿಕ ನೀಡಿಲ್ಲ"  ಎಂದು ಹೇಳಿದ್ದರು. 
ಅದಕ್ಕೆ ಪ್ರತಿಕ್ರಿಯಿಸಿದ ಅಮ್ರಪಾಲಿಯ ಅಧ್ಯಕ್ಷ ಅನಿಲ್ ಶರ್ಮ " ಹರ್ಭಜನ್ ಅವರ ವಿಲ್ಲಾ ಅವರಿಗೆ ಮಂಜೂರಾಗಿದೆ. ಅವರು ಯಾವಾಗ ಬೇಕಾದರೂ ಅದನ್ನು ತೆಗೆದುಕೊಳ್ಳಬಹುದು. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ" ಎಂದು ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News