ಮೂಡುಬಿದಿರೆ ಸವಿತಾ ಸಮಾಜದ ಅಧ್ಯಕ್ಷರಾಗಿ ಆನಂದ ಭಂಡಾರಿ
Update: 2016-04-16 20:40 IST
ಮೂಡುಬಿದಿರೆ: ಪ್ರಸ್ತುತ ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ ಸವಿತಾ ಸಮಾಜ ಮೂಡುಬಿದಿರೆ ವಲಯ ಇದರ ನೂತನ ಅಧ್ಯಕ್ಷರಾಗಿ ಆನಂದ ಭಂಡಾರಿ ಪ್ರಾಂತ್ಯ ಇವರು ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಸವಿತಾ ಸಮಾಜದ ನಿರ್ಗಮನ ಅಧ್ಯಕ್ಷ ಪ್ರಕಾಶ್ ಭಂಢಾರಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಪ್ರಸಕ್ತ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಹರೀಶ್ ಭಂಡಾರಿ, ಉಪಾಧ್ಯಕ್ಷರಾಗಿ ಆದಿತ್ಯ ಕುಮಾರ್, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ (ದುರ್ಗಾ) ಜತೆ ಕಾರ್ಯದರ್ಶಿಯಾಗಿ ಜಯ ಬಂಗೇರ, ಕೋಶಾಧಿಕಾರಿಯಾಗಿ ತಿಮ್ಮಪ್ಪ ಸುವರ್ಣ ಆಯ್ಕೆಯಾಗಿದ್ದಾರೆ.