ಅಮೆರಿಕ: ಟಾಟಾ ಸಮೂಹ ಕಂಪೆನಿಗಳಿಗೆ ಭಾರೀ ದಂಡ

Update: 2016-04-16 15:46 GMT

ವಾಶಿಂಗ್ಟನ್, ಎ. 16: ವ್ಯಾಪಾರ ರಹಸ್ಯ ಕಾನೂನು ವ್ಯಾಜ್ಯವೊಂದರಲ್ಲಿ, ಭಾರತದ ಟಾಟಾ ಸಮೂಹದ ಎರಡು ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಶನಲ್ ಕಾರ್ಪ್‌ಗಳಿಗೆ ಅಮೆರಿಕದ ನ್ಯಾಯಾಲಯವೊಂದು 940 ಮಿಲಿಯ ಡಾಲರ್ (ಸುಮಾರು 6,257 ಕೋಟಿ ರೂಪಾಯಿ) ದಂಡ ವಿಧಿಸಿದೆ.

ಎಪಿಕ್ ಸಿಸ್ಟಮ್ಸ್‌ನ ಸಾಫ್ಟ್‌ವೇರನ್ನು ಕದ್ದಿರುವುದಕ್ಕಾಗಿ ಟಾಟಾ ಸಮೂಹದ ಈ ಎರಡು ಕಂಪೆನಿಗಳು ಎಪಿಕ್ ಸಿಸ್ಟಮ್ಸ್‌ಗೆ 240 ಮಿಲಿಯ ಡಾಲರ್ (ಸುಮಾರು 1,597 ಕೋಟಿ ರೂಪಾಯಿ) ಪಾವತಿಸಬೇಕು ಎಂದು ವಿಸ್ಕೋನ್ಸಿನ್ ರಾಜ್ಯದಲ್ಲಿರುವ ಫೆಡರಲ್ ಗ್ರಾಂಡ್ ಜ್ಯೂರಿ ತೀರ್ಪು ನೀಡಿದೆ.

ಅದೂ ಅಲ್ಲದೆ, ದಂಡವಾಗಿ ಟಾಟಾ ಕಂಪೆನಿಗಳು ಇನ್ನೂ 700 ಮಿಲಿಯ ಡಾಲರ್ (ಸುಮಾರು 4,659 ಕೋಟಿ ರೂಪಾಯಿ) ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿದೆ.

ಟಿಸಿಎಸ್ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಶನಲ್ ಕಾರ್ಪ್ ಕಂಪೆನಿಗಳು ತನ್ನ ವ್ಯಾಪಾರ ರಹಸ್ಯಗಳು, ಗೌಪ್ಯ ಮಾಹಿತಿ, ದಾಖಲೆಗಳು ಹಾಗೂ ಅಂಕಿಅಂಶಗಳನ್ನು ‘‘ನಾಚಿಕೆಯಿಲ್ಲದೆ ಕದ್ದಿವೆ’’ ಎಂದು ಆರೋಪಿಸಿ ಎಪಿಕ್ ಸಿಸ್ಟಮ್ಸ್ 2014ರ ಅಕ್ಟೋಬರ್‌ನಲ್ಲಿ ಮೊಕದ್ದಮೆ ಹೂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News