ಭಟ್ಕಳ: ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು: ಪ್ರಕರಣ ದಾಖಲು
Update: 2016-04-16 23:37 IST
ಭಟ್ಕಳ: ತಾಲೂಕಿನ ಮುರ್ಡೇಶ್ವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವ ಮರಳಿ ದಡಸೇರಬೇಕಾದರೆ ಸಮುದ್ರದಲೆಗೆ ಸಿಲುಕಿ ಆಯತಪ್ಪಿ ಬಿದ್ದು ಬೋಟಿನ ಪ್ಯಾನ್ ತಲೆಗೆ ತಗುಲಿ ಸಮುದ್ರದಲ್ಲಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತ ಮೀನುಗಾರನನ್ನು ತಾಲೂಕಿನ ಮುರ್ಡೇಶ್ವರದ ಮನಾಲಿ ಗಾರ್ಡನ್ ನಿವಾಸಿಯಾದ ವಿನಾಯಕ ರಾಮ ಹರಿಕಂತ್ರ (23) ಎಂದು ಗುರುತಿಸಲಾಗಿದೆ. ವಿನಾಯಕರನ್ನು ರಕ್ಷಿಸಲು ಸಮುದ್ರಕ್ಕೆ ಧುಮುಕಿದ ಲೋಕೇಶ ಕಾಮಾಜಿ ಹರಿಕಂತ್ರ (27) ಎಂಬುವವರಿಗೆ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.