ಭಾರತ ಕುರುಡರ ರಾಜ್ಯದಲ್ಲಿ ಒಕ್ಕಣ್ಣ: ರಾಜನ್
ಹೊಸದಿಲ್ಲಿ, ಎ.16: ಜಾಗತಿಕ ಆರ್ಥಿಕತೆಯಲ್ಲಿ ಭಾರತವು ‘ಉಜ್ವಲ ನಕ್ಷತ್ರ’ವೆಂದು ವರ್ಣಿಸಲ್ಪಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಗರ್ವನರ್ ರಘುರಾಮ್ ರಾಜನ್ ಈ ಸ್ಥಿತಿಯನ್ನು ‘ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜನಂತೆ’ ಎಂದು ವ್ಯಾಖ್ಯಾನಿಸಿದ್ದಾರೆ.
ಮಬ್ಬು ಕವಿದ ಜಾಗತಿಕ ಆರ್ಥಿಕತೆಯ ನಡುವೆ, ಐಎಂಎಫ್ ಸಹಿತ ಹಲವರು ಭಾರತದ ಆರ್ಥಿಕತೆ ಯನ್ನು ಬೆಳಕಿನ ಚುಕ್ಕಿಗಳಲ್ಲೊಂದು ಎಂದು ಬಣ್ಣಿಸಿವೆ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬಾಹ್ಯ ಆಘಾತದ ಪರಿಣಾಮವನ್ನು ಅಗತ್ಯ ಕ್ರಮಗಳ ಮೂಲಕ ಕನಿಷ್ಠಗೊಳಿಸಿರುವ ರಾಜನ್ ನೇತೃತ್ವದ ಆರ್‌ಬಿಐಗೆ ಅವು ನೀಡಿವೆ.
‘‘ನಾವು ತೃಪ್ತಿಪಡಬಹುದಾದ ಜಾಗವೊಂದನ್ನು ಇನ್ನಷ್ಟೇ ಪಡೆಯಬೇಕಿದೆಯೆಂಬುದು ನನ್ನ ಅಭಿಪ್ರಾಯವಾಗಿದೆ. ನಾವು ಕುರುಡರ ರಾಜ್ಯದಲ್ಲಿ ಒಕ್ಕಣ್ಣ ರಾಜನಂತಿದ್ದೇವೆ. ತಾವು ಸ್ವಲ್ಪ ಮಟ್ಟಿಗೆ ಆ ಮಾರ್ಗದಲ್ಲಿದ್ದೇವೆ’’ ಎಂದು ರಾಜನ್ ಹೇಳಿದ್ದಾರೆ.
ಉಜ್ವಲ ನಕ್ಷತ್ರ ಸಿದ್ಧಾಂತ ಹಾಗೂ ಆ ಸ್ಥಿತಿಯನ್ನು ಖಚಿತಪಡಿಸಲು ಅವರ ‘ರಹಸ್ಯ ಸಂಭಾರ’ದ ಬಗ್ಗೆ ರಾಜನ್‌ರನ್ನು ಪ್ರಶ್ನಿಸಲಾಗಿತ್ತು.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮಾಜಿ ಮುಖ್ಯ ಆರ್ಥಿಕಜ್ಞ ಹಾಗೂ ಶಿಕಾಗೊ ವಿಶ್ವವಿದ್ಯಾನಿಲಯದ ಬೂತ್ ವ್ಯಾಪಾರ ಶಾಲೆಯ ರಜಾಕಾಲದ ಅರ್ಥಶಾಸ್ತ್ರ ಪ್ರೊಫೆಸರ್ ಆಗಿರುವ ರಾಜನ್, ವಿಶ್ವಬ್ಯಾಂಕ್ ಹಾಗೂ ಐಎಂಎಫ್‌ಗಳ ವಸಂತ ಸಭೆಗಳಿಗಾಗಿ ಹಾಗೂ ವಿತ್ತ ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಗವರ್ನರರ ಜಿ20 ಸಭೆಗಾಗಿ ವಾಶಿಂಗ್ಟನ್‌ನಲ್ಲಿದ್ದರು.
‘‘ನಮ್ಮ ಮಧ್ಯಮ ಓಟದ ಬೆಳವಣೆಗೆ ಸಾಮರ್ಥ್ಯ ವೆಂದು ನಾವು ನಂಬಿರುವುದನ್ನು ಸಾಧಿ ಸಲು ಸಾಧ್ಯವಿರುವ ಬಿಂದುವಿನತ್ತ ಎಲ್ಲ ವಿಷಯಗಳು ತಿರುಗುತ್ತಿವೆಯೆಂದು ನಾವು ಭಾವಿಸಿದ್ದೇವೆ. ಎಲ್ಲವೂ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿರುವುದರಿಂದ ಬಂಡವಾಳದ ಹರಿವು ಪ್ರಬಲವಾಗಿ ಆರಂಭವಾಗಿದೆ. ನಾವು ತೃಪ್ತಿಕರ ಮಟ್ಟದ ಮ್ಯಾಕ್ರೊ ಸ್ಥಿರತೆ ಪಡೆದಿದ್ದೇವೆ. ಇದು ಎಲ್ಲ ಆಘಾತಗಳಿಗೆ ತಡೆಯಾಗದಾದರೂ, ಸಾಕಷ್ಟು ಸಂಖ್ಯೆಯ ಆಘಾತಗಳನ್ನು ತಡೆದುಕೊಳ್ಳಬಲ್ಲದು’’ ಎಂದು ‘ಮಾರ್ಕೆಟ್ ವಾಚ್’ಗೆ ನೀಡಿದ ಸಂದರ್ಶನವೊಂದರಲ್ಲಿ ರಾಜನ್ ತಿಳಿಸಿದ್ದಾರೆ.
ಡೌ ಜೋನ್ಸ್ ಆ್ಯಂಡ್ ಕೊ. ಪ್ರಕಟಿಸುತ್ತಿರುವ ‘ಮಾರ್ಕೆಟ್ ವಾಚ್’ ದಿ ವಾಲ್ ಸ್ಟ್ರೀಟ್ ಡಿಜಿಟಲ್ ನೆಟ್‌ವರ್ಕ್‌ನ ಭಾಗವಾಗಿದೆ.