×
Ad

ಬಜ್ಪೆಯಲ್ಲಿ ಜಲಾಲಿಯ್ಯ ಮಜ್ಲಿಸ್

Update: 2016-04-16 23:53 IST


 ಬಜ್ಪೆ, ಎ.16: ಎಸ್ಸೆಸ್ಸೆಫ್, ಎಸ್‌ವೈಎಸ್ ಜಂಟಿ ಆಶ್ರಯದಲ್ಲಿ ಆಧ್ಯಾತ್ಮಿಕ ಸಂಗಮ, ಧಾರ್ಮಿಕ ಮತ ಪ್ರಭಾಷಣ, ಅನುಸ್ಮರಣಾ ಸಂಗಮ, ಜಲಾಲಿಯ್ಯ ರಾತೀಬ್ ಮಜ್ಲಿಸ್ ಕಾರ್ಯಕ್ರಮ ಬಣಕಲ್ ಬಾವ ಕಾಂಪೌಂಡ್ ಜುಮಾ ಮಸೀದಿ ಬಳಿ ಸಮಾಪ್ತಿಗೊಂಡಿತು. ಬದ್ರುದ್ದೀನ್ ಅಝ್‌ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ಮುಖ್ಯ ಪ್ರಭಾಷಣ ನಡೆಸಿದರು.
ಜಲಾಲಿಯ್ಯ ನೇತೃತ್ವವನ್ನು ಅಸೈಯದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜೆ. ಇಸ್ಮಾಯೀಲ್ ಹಾಜಿ, ಖಾವಳೆ ಅಬ್ದುಲ್ ಹಮೀದ್ ಕೊಳಂಬೆ, ಮುಹಮ್ಮದ್ ಬಶೀರ್ ಅಲ್‌ರಫ, ಮುಹಮ್ಮದ್ ಹನೀಫ್ ಹಾಜಿ, ಸಾಹುಲ್ ಹಮೀದ್, ಅಕ್ಬರ್ ಹಾಜಿ ಬಜ್ಪೆ, ನಝೀರ್ ಬಿ.ಡಿ.ಎಸ್, ಮಜೀದ್, ಅಬ್ದುಲ್ ಹಮೀದ್, ರಫೀಕ್ ಇಂಜಿನಿಯರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News