×
Ad

ಮುಂಬೈಯಲ್ಲಿ 2000 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ: ಐವರ ಬಂಧನ

Update: 2016-04-17 12:24 IST

ಮುಂಬೈ, ಎಪ್ರಿಲ್ 17: ಮಹಾರಾಷ್ಟ್ರದ ಥಾಣೆ ಕ್ರೈಮ್‌ಬ್ರಾಂಚ್ ಶನಿವಾರ ಮಾದಕವಸ್ತು ವಿತರಣಾ ಜಾಲದ ವಿರುದ್ಧ ಬಹುದೊಡ್ಡ ಯಶಸ್ಸನ್ನು ಸಾಧಿಸಿದೆ. ಕ್ರೈಂ ಬ್ರಾಂಚ್ ತಂಡ ಶನಿವಾರ ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ.

ಎಲ್ಲ ಆರೋಪಿಗಳನ್ನು ಪ್ರಶ್ನಿಸಲಾಗುತ್ತಿದ್ದು, ಈ ಮಾದಕ ವಸ್ತುಗಳ ಮೂಲ ಎಲ್ಲಿದೆ ಮತ್ತು ಎಲ್ಲಿಂದ ಇದು ಸರಬರಾಜು ಆಗುತ್ತಿದೆ ಎಂದು ತಿಳಿಯುವ ಪ್ರಯತ್ನವನ್ನು ಕ್ರೈಂಬ್ರಾಂಚ್ ಪೊಲೀಸರು ನಡೆಸುತ್ತಿದ್ದಾರೆ. ಈ ಮಾದಕವಸ್ತು ಗ್ಯಾಂಗ್ ವಿದೇಶದೊಂದಿಗೆ ಸಂಪರ್ಕ ಹೊಂದಿರಬೇಕೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News