ಕೆ.ಸಿ.ರೋಡ್: ಎಸ್ಸೆಸ್ಸೆಫ್ ಮಹಾಸಮ್ಮೇಳನ
ಉಳ್ಳಾಲ. ಎ.17: ಎಸ್ಸೆಸ್ಸೆಫ್ ಕೆ.ಸಿ.ರೋಡ್ ಶಾಖೆಯ ಬೆಳ್ಳಿಹಬ್ಬದ ಮಹಾಸಮ್ಮೇಳನ-2016, ಬುರ್ದಾ ಮಜ್ಲಿಸ್ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಕೆ.ಸಿ.ರೋಡ್‌ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಇಸ್ಲಾಮ್ ಶಾಂತಿಯ ಧರ್ಮವಾಗಿದ್ದು, ಭಯೋತ್ಪಾದನೆಯನ್ನು ಎಂದೂ ಸಹಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ದರ್ಸ್ ಅಧ್ಯಾಪನದಲ್ಲಿ 30 ದಶಕಗಳನ್ನು ಪೂರೈಸಿದ ಶೈಖುನಾ ಕೆ.ಸಿ.ರೋಡ್ ಉಸ್ತಾದರಿಗೆ ಸುನ್ನಿ ಸಂಘಸಂಸ್ಥೆಗಳಿಂದ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಉಪಾಧ್ಯಕ್ಷ ಅಲಿಕುಂಞಿ ಉಸ್ತಾದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುರ್ರಹ್ಮಾನ್ ಸಅದಿ ಓಣಕ್ಕಾಡ್, ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ , ಹಾಜಿ ಪಿ.ಐಅಹ್ಮದ್ ಕುಂಞಿ ಪಂಜಳ, ಕೆ.ಎಂ.ಅಬೂಬಕ್ಕರ್ ಸಿದ್ದೀಕ್, ಎಸ್‌ವೈಎಸ್ ತಲಪಾಡಿ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್, ಅಬ್ದುಲ್ ಹಕೀಂ, ಮುನೀರ್ ಸಖಾಫಿ, ಪಿ.ಕೆ.ಮುಹಮ್ಮದ್ ಮದನಿ, ಅಬ್ಬಾಸ್ ಹಾಜಿ, ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಗ್ರಾಪಂ ಮಾಜಿ ಸದಸ್ಯ ಮೊಯ್ದಿನ್ ಬಾವ, ತಲಪಾಡಿ ಗ್ರಾಪಂ ಸದಸ್ಯ ಹಸೈನಾರ್, ಖಾದರ್ ಮಕ್ಯಾರ್, ಇಬ್ರಾಹೀಂ ಕೊಮರಂಗಳ, ಅಬ್ದುಲ್ ಸತ್ತಾರ್, ನಝೀರ್ ಕೆಸಿಆರ್, ಸಾಬಿರ್ ಕೆ.ಸಿ.ರೋಡ್, ಅಫ್ಸಲ್ ಮುಂತಾದವರು ಈ ಸಂದರ್ ಉಪಸ್ಥಿತರಿದ್ದರು.
ಸಿ.ಎಂ.ಮುಹಮ್ಮದ್ ಮುಸ್ತಫಾ ಝುಹರಿ ಕೆ.ಸಿ.ರೋಡ್ ಸ್ವಾಗತಿಸಿದರು