×
Ad

ಸೂಪರ್‌ಸ್ಟಾರ್ ಮಮ್ಮುಟ್ಟಿಯನ್ನು ನೋಡಿ ಹಣಹಾಕಿದವರಿಗೆ ಪಂಗನಾಮ!

Update: 2016-04-17 13:53 IST

 ಕೊಚ್ಚಿ, ಎಪ್ರಿಲ್ 17: ಕೋಟ್ಯಂತರ ರೂ.ಮೌಲ್ಯದ ಬಂಗಾರ ಹೂಡಿಕೆ ಸ್ವೀಕರಿಸಿದ ಬಳಿಕ ಸೂಪರ್‌ಸ್ಟಾರ್ ಮಮ್ಮುಟ್ಟಿಯನ್ನು ಬ್ರಾಂಡ್ ಅಂಬಾಸಡರ್ ಮಾಡಿದ್ದ ಅವತಾರ್ ಜುವೆಲ್ಲರಿ ಮಾಲಕರು ಭೂಗತರಾಗಿದ್ದಾರೆ. ಕೇರಳದ ಎಲ್ಲ ಶಾಖೆಗಳನ್ನು ಕಳೆದ ತಿಂಗಳಲ್ಲಿ ಮುಚ್ಚಿದ್ದು ಕೊನೆಯದಾಗಿ ಕೊಚ್ಚಿಯ ಲುಲು ಮಾಲ್‌ನಲ್ಲಿದ್ದ ಶೋರೂಂನ್ನು ಮುಚ್ಚಲಾಗಿದ್ದು ಇದೀಗ ಅವತಾರ್ ಗ್ರೂಪ್‌ನ ವಂಚನೆ ಬಹಿರಂಗವಾಗಿದೆ.

 ಮಮ್ಮುಟ್ಟಿಯನ್ನು ಉಪಯೋಗಿಸಿ ಭಾರೀ ಪ್ರಚಾರ ನಡೆಸಿದ್ದ ಅವತಾರ್ ಗ್ರೂಪ್ ಬಂಗಾರಕ್ಕೆ ಠೇವಣಿಯನ್ನು ಸಂಗ್ರಹಿಸಿ ವಂಚನೆ ನಡೆಸಿದೆ. ಅವತಾರ್ ಶಾಖೆಗಳಲ್ಲಿ ಬಂಗಾರವನ್ನು ಇಟ್ಟರೆ ಪ್ರತಿತಿಂಗಳೂ ಬಡ್ಡಿದರದ ಬಂಗಾರ ಲಭಿಸಲಿದೆ ಎಂದು ಭರವಸೆಯನ್ನು ನಂಬಿದವರು ಲಕ್ಷಾಂತರ ರೂಪಾಯಿ ವಂಚನೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ. ಮಕ್ಕಳ ಮದುವೆ ಅಗತ್ಯಕ್ಕೆ, ಕಪ್ಪುಹಣ ಬಿಳಿಮಾಡಲು ಅವತಾರ್‌ನಲ್ಲಿ ಹೂಡಿಕೆ ಮಾಡಿದವರು ಇದ್ದಾರೆ. ಅವತಾರ್‌ನ ಎಲ್ಲ ಶೋರೂಂ ಮತ್ತ ಅವತಾರ್‌ನ ಗೋಲ್ಡ್ ಡಿಪಾಸಿಟ್ ಸ್ಕೀಂ ಪ್ರಚಾರಕ್ಕೆ ಮುಂದೆ ನಿಂತದ್ದು ಮಮ್ಮುಟ್ಟಿಯಾದ್ದರಿಂದ ಹಣ ಕಳಕೊಂಡವರು ಮಮ್ಮುಟ್ಟಿಯ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ದೂರು ಲಭಿಸಿದರೆ ಬ್ರಾಂಡ್ ಅಂಬಾಸಡ್ ಮಮ್ಮುಟ್ಟಿ ಹೆಸರಲ್ಲಿಯೂ ಕೇಸು ದಾಖಲಿಸಲಾಗುವುದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. 2013ರಿಂದ ಕೇರಳದ ವಿವಿಧ ಭಾಗಗಳಲ್ಲಿ ಅವತಾರ್ ಗ್ರೂಪ್ ಜುವೆಲ್ಲರಿಗಳನ್ನು ಆರಂಭಿಸಿತ್ತು.ಕೊಚ್ಚಿಯ ಲುಲು ಮಾಲ್‌ನಲ್ಲಿ ಶೋರೂಂ ಉದ್ಘಾಟನೆಗೆ ಮಮ್ಮುಟ್ಟಿ ಜೊತೆಗೆ ಎಂಎ ಯೂಸುಫಲಿ ಮುಖ್ಯ ಅತಿಥಿಯಾಗಿದ್ದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News