ಭಾರತದಲ್ಲಿ ವಾಸ್ತವ್ಯ ಇರುವ ಪಾಕಿಸ್ತಾನಿ ಹಿಂದೂಗಳಿಗೆ ಆಸ್ತಿ ಖರೀದಿಸುವ ಹಕ್ಕು ದೊರೆಯಲಿದೆ
ಹೊಸದಿಲ್ಲಿ, ಎಪ್ರಿಲ್17: ಭಾರತದಲ್ಲಿ ಸುದೀರ್ಘಸಮಯದಿಂದ ಇರುವ ಪಾಕಿಸ್ತಾನಿ ಹಿಂದೂಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಶೀಘ್ರದಲ್ಲಿ ಭಾರತದಲ್ಲಿ ಆಸ್ತಿ ಖರೀದಿಸುವ ಹಕ್ಕು ದೊರೆಯಲಿದೆ ಎಂದು ವರದಿಗಳು ತಿಳಿಸಿವೆ. ಜೊತೆ ಇಲ್ಲಿ ಅವರು ಬ್ಯಾಂಕ್ ಖಾತೆ ತೆರೆಯಬಹುದು ಪಾನ್ ಕಾರ್ಡ್‌ನ್ನೂ ಪಡೆಯಬಹುದಾಗಿದೆ. ಮೋದಿ ಸರಕಾರ ಶೀಘ್ರದಲ್ಲಿ ಈ ಕುರಿತು ದೊಡ್ಡ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎನ್ನಲಾಗಿದೆ. ಅಧಿಕೃತ ಮೂಲಗಳ ಪ್ರಕಾರ ಕೇಂದ್ರ ಸರಕಾರ ಭಾರತೀಯ ನಾಗರಿಕರಂತೆ ರಿಜಿಸ್ಟ್ರೇಶನ್ ಕಡಿತಗೊಳಿಸಿ ಹದಿನೈದು ಸಾವಿರದಿಂದ ನೂರುರೂಪಾಯಿ ಮಾಡಲಿದೆ.
ಜೋಧಪುರ, ಜೈಸಲ್ಮೇರ್, ಜೈಪುರ, ರಾಯ್‌ಪುರ, ಅಹ್ಮದಾಬಾದ್, ರಾಜ್‌ಕೋಟ್, ಕಚ್ಛ್, ಭೋಪಾಲ,ಇಂದೋರ್, ಮುಂಬೈ, ನಾಗಪುರ, ಪುಣೆ, ದಿಲ್ಲಿ ಮತ್ತು ಲಕ್ನೊಗಳಂತಹ ನಗರಗಳಲ್ಲಿ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸುಮಾರು 400 ಶಿಬಿರಗಳಿವೆ. ಇಲ್ಲಿ ಸುಮಾರು ಎರಡು ಲಕ್ಷ ಜನರು ವಾಸವಾಗಿದ್ದಾರೆ. ಗೃಹ ಸಚಿವಾಲಯದ ಕಡೆಯಿಂದ ಜಾರಿಗೊಳಿಸಲಾದ ನೋಟಿಸ್ ಪ್ರಕಾರ ಭಾರತದಲ್ಲಿ ವಾಸ್ತವ್ಯ ಇರುವ ಪಾಕಿಸ್ತಾನಿ ಅಲ್ಪಸಂಖ್ಯಾಕರ ಸ್ಥಿತಿಗತಿ ಕುರಿತು ಸರಕಾರ ನಿಗಾಇರಿಸಲಿದೆ. ಶೀಘ್ರದಲ್ಲಿ ಅವರಿಗೆ ಎದರುರಾಗಿರುವ ತ್ರಾಸವನ್ನು ದೂರಗೊಳಿಸುವ ದೊಡ್ಡ ನಿರ್ಧಾರವೊಂದನ್ನು ಸರಕಾರ ತಳೆಯಲಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಸರಕಾರದ ಪ್ರಕಾರ ಈಗ ಇರುವ ಸವಲತ್ತಲ್ಲದೆ ಇರುವಲ್ಲಿ ಇರಬೇಕೆಂಬುದರ ಬದಲಾಗಿ ಇತರ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಗಿ ಬರುವ ಸ್ವಾತಂತ್ರ್ಯ, ಎನ್ ಸಿಆರ್ ರೀಜನ್‌ನಲ್ಲಿರುವ ಜನರು ಅಡ್ಡಾಡುವುದಕ್ಕೆ ಅನುಮತಿ, ಇತರ ರಾಜ್ಯಗಳಿಗೆ ಹೋಗುವುದಕ್ಕಾಗಿ ಕಾನೂನು ಸಡಿಲಿಕೆಯಂತಹ ನಿರ್ಧಾರಗಳು ಕೇಂದ್ರಸರಕಾರದಿಂದ ಹೊರಬರಲಿದೆ ಎನ್ನಲಾಗಿದೆ. ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭಾರತೀಯ ನಾಗರಿಕತೆ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪ್ರಸ್ತಾವವೂ ಇದರಲ್ಲಿ ಸೇರಿದೆ ಎಂದು ವರದಿಯಾಗಿದೆ.