ಜಡೇಜ ಮದುವೆ ಮೆರವಣಿಗೆಯಲ್ಲಿ ಗುಂಡು...!
ಜಡೇಜ ಮದುವೆ ಮೆರವಣಿಗೆಯಲ್ಲಿ ಗುಂಡು...!
ರಾಜ್‌ಕೋಟ್, ಎ.17: ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜ ಇಂದು ಎಂಜಿನಿಯರ್ ರೀವಾ ಸೋಲಂಕಿ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಆದರೆ ಮದುವೆಯ ಮೆರವಣಿಗೆಯ ವೇಳೆ ಸಂಬಂಧಿಕರೊಬ್ಬರು ಗುಂಡು ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ವಿವಾಹದ ಮೆರವಣಿಗೆಯ ಸಂಭ್ರಮಾಚರಣೆಯ ಅಂಗವಾಗಿ ಗಾಳಿಯಲ್ಲಿ ಗುಂಡು ಹಾರಿಸಿಲಾಗಿದೆ. ಮದುಮಗ ಜಡೇಜ ಅವರ ಸಮೀಪದಿಂದಲೇ ಗುಂಡು ಹಾರಾಟ ನಡೆದಿದೆ. ಯಾರಿಗೂ ಗಾಯವಾಗಿಲ್ಲ. ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ಧಾರೆ.
ರಿವಾಲ್ವರ್‌ಗೆ ಪರವಾನಿಗೆ ಇದ್ದರೂ, ಕೇವಲ ಆತ್ಮರಕ್ಷಣೆಗಾಗಿ ಮಾತ್ರ ರಿವಾಲ್ವರ್ ಬಳಸಬಹುದು. ಕಾನೂನುಬಾಹಿರವಾಗಿ ಗುಂಡು ಹಾರಿಸಿರುವ ಆರೋಪ ಸಾಬೀತಾದರೆ ಆರೋಪಿ ಮೂರು ವರ್ಷ ಜೈಲು ಸಜೆ ಎದುರಿಸಬೇಕಾಗುತ್ತದೆ ಎಂದು ಲೋಧಿಕ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹೇಂದ್ರ ಸಿಂಗ್ ರಾಣಾ ತಿಳಿಸಿದ್ದಾರೆ.
ಮದುವೆಯ ಮುನ್ನ ಸಂಗೀತ ಕಾರ್ಯಕ್ರಮದಲ್ಲಿ ಜಡೇಜ ಕತ್ತಿ ವರೆಸೆಯ ಕೌಶಲ್ಯವನ್ನು ಪ್ರದರ್ಶಿಸಿದ್ದರು.ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.