×
Ad

ಉತ್ತರಾಖಂಡದಲ್ಲಿ ಅಮಿತ್ ಶಾ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಪೋಸ್ಟರ್!

Update: 2016-04-17 16:43 IST

ಉತ್ತರಾಖಂಡ, ಎಪ್ರಿಲ್.17: ಉತ್ತರಖಂಡದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಒಂದು ಹೊಸ ಪೋಸ್ಟರ್ ಅಂಟಿಸಲಾಗಿದ್ದು ಕಾಂಗ್ರೆಸ್‌ನ ಬಂಡಾಯ ಶಾಸಕರನ್ನು ಖರೀದಿಸುತ್ತಿರುವಂತೆ ತೋರಿಸಲಾಗಿದೆ. ಶಾಸಕರನ್ನು ಕಪ್ಪು ಕುರಿಗಳಂತೆ ತೋರಿಸಲಾಗಿದೆ. ಅಮಿತ್ ಶಾ ಇವರನ್ನು ಖರೀದಿಸುತ್ತಿದ್ದಾರೆ. ಶನಿವಾರ ಡೆಹ್ರಾಡೂನ್‌ನ ಗೋಡೆಗಳಲ್ಲಿ ಈ ಪೋಸ್ಟರ್ ಕಂಡುಬಂದಿದೆ. ಅದರಲ್ಲಿ ದಪ್ಪ ಅಕ್ಷರಗಳಲ್ಲಿ ಬಿಜೆಪಿಗೆ ಸರಕಾರ ರಚಿಸಲು ಮಾರಲ್ಪಡುವ ಮೂರು ಶಾಸಕರು ಬೇಕಾಗಿದ್ದಾರೆ ಎಂದು ಬರೆದಿರುವುದಾಗಿ ವರದಿಯಾಗಿದೆ.

ಇತ್ತ ಬಿಜೆಪಿ ನಗರ ಅಧ್ಯಕ್ಷ ಉಮೇಶ್ ಅಗರವಾಲ್‌ರು ಇದು ಕಾಂಗ್ರೆಸ್ ಕೃತ್ಯ ಎಂದು ಹೇಳಿದ್ದಾರೆ. ಮಾರಲ್ಪಟ್ಟ ಕಾಂಗ್ರೆಸ್ ಈಗ ಇಂತಹ ಕೃತ್ಯಕ್ಕಿಳಿದಿದೆ. ಆದ್ದರಿಂದ ಹೆಸರನ್ನಡಗಿಸಿ ಬೆನ್ನಿಗೆ ಇರಿದಿದ್ದಾರೆ. ಬಿಜೆಪಿ ಇದಕ್ಕೆ ರಾಜಕೀಯ ರೀತಿಯಲ್ಲಿ ಉತ್ತರ ನೀಡಲಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ತಮಗೂ ಈ ಪೋಸ್ಟರ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ. ಉತ್ತರಖಂಡದಲ್ಲಿ ಅಂಟಿಸಲಾದ ಪೋಸ್ಟರ್ ಜನಸಾಮಾನ್ಯರ ಭಾವನೆಯನ್ನು ಪ್ರತಿನಿಧಿಸುತ್ತಿದೆ ಎಂದು ಅದು ಹೇಳಿದೆ. ಇದಕ್ಕಿಂತ ಮೊದಲು ಕೇಶವ ಪ್ರಸಾದ್ ಮೌರ್ಯರ ವಿವಾದಿತ ಪೋಸ್ಟರ್ ಉತ್ತರ ಪ್ರದೇಶದಲ್ಲಿ ಅಂಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News