ಪುತ್ತೂರು: ವಿದ್ಯುತ್ ಶಾಕ್‌ನಿಂದ ಯುವಕ ಸಾವು

Update: 2016-04-17 14:25 GMT

ಪುತ್ತೂರು: ವಿದ್ಯುತ್ ಶಾಕ್ ಉಂಟಾಗಿ ಜಾರ್ಕಂಡ್ ಮೂಲದ ಕೂಲಿ ಕಾರ್ಮಿಕ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ನಗರದ ಕಲ್ಲಾರೆ ಎಂಬಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ನಗರದ ಕಲ್ಲಾರೆಯಲ್ಲಿರುವ ಕೋಳಿ ಫಾರಂನ ಉದ್ಯೋಗಿ ಜಾರ್ಖಂಡ್ ಮೂಲದ ಯುವಕ ವಿಜಯ್ (23) ಮೃತ ಪಟ್ಟ ವ್ಯಕ್ತಿ. ಇವರು ಶನಿವಾರ ರಾತ್ರಿ ವಿದ್ಯುತ್‌ನ ಇನ್‌ವರ್ಟರ್‌ನ ಪ್ಲಗ್ ಸಿಕ್ಕಿಸುವ ಸಂದರ್ಭಲ್ಲಿ ವಿದ್ಯುತ್ ಶಾಕ್ ಉಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ರಾತ್ರಿ ವೇಳೆ ಈ ಘಟನೆ ನಡೆದಿರುವ ಕಾರಣ ಮೃತಪಟ್ಟಿರುವುದು ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿತ್ತು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News