×
Ad

ನನಗಿಂತ ದೊಡ್ಡ ದೇಶಪ್ರೇಮಿ ಇನ್ನೊಬ್ಬರಿಲ್ಲ:ಶಾರುಖ್

Update: 2016-04-17 21:40 IST

ಮುಂಬೈ,ಎ.17: ನಾನು ಈ ದೇಶಕ್ಕೆ ಸೇರಿದವನಾಗಿದ್ದೇನೆ, ನಾನು ದೇಶಪ್ರೇಮಿಯಾಗಿದ್ದೇನೆ ಎಂದು ನಾನು ಹೇಳುವಂತೆ ಮಾಡಿದಾಗಲೆಲ್ಲ ನನಗೆ ತೀರ ದುಖಃವಾಗುತ್ತದೆ. ಆಗೆಲ್ಲ ನನಗೆ ಅಳಬೇಕು ಎನ್ನಿಸುತ್ತದೆ....ಇವು ಕಳೆದ ವರ್ಷ ಅಸಹಿಷ್ಣುತೆಯ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರ ಎದೆಯಾಳದ ನುಡಿಗಳು.

ಇಂಡಿಯಾ ಟಿವಿಯ ‘ಆಪ್ ಕಿ ಅದಾಲತ್’ನಲ್ಲಿ ರಜತ್ ಶರ್ಮಾ ಜೊತೆ ಸಂವಾದದಲ್ಲಿ ಶಾರುಕ್,ನಾನೋರ್ವ ದೇಶಪ್ರೇಮಿ,ನಾನೇ ಏನು...ನಾವೆಲ್ಲರೂ ದೇಶಪ್ರೇಮಿಗಳೇ. ನಾವು ದೇಶಪ್ರೇಮಿಗಳೆಂದು ಹೇಳಿಕೊಳ್ಳಲು ನಾವು ಇತರರೊಂದಿಗೆ ಸ್ಪರ್ಧೆಗೆ ಬೀಳಬೇಕಾಗಿಲ್ಲ. ಸಹಿಷ್ಣುಗಳಾಗಿ,ಸಂತೋಷದಿಂದಿರಿ,ಕಷ್ಟಪಟ್ಟು ಕೆಲಸ ಮಾಡಿ ಮತ್ತು ಈ ದೇಶವನ್ನು ಮುಂದಕ್ಕೆ ಒಯ್ಯುವಂತೆ ನಾನು ಯುವಜನರಿಗೆ ಹೇಳಬಯಸುತ್ತೇನೆ ಎಂದರು.

ನಮ್ಮದು ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಮತ್ತು ಸುಂದರ ದೇಶಗಳಲ್ಲೊಂದು. ನಾವು ಕ್ಷುಲ್ಲಕ ಗೊಡ್ಡುವಿಚಾರಗಳಿಗೆ ಕಟ್ಟು ಬೀಳಬಾರದು ಎಂದರು.
 ನನ್ನ ಚಿತ್ರ ‘ಫ್ಯಾನ್’ ಹಿಟ್ ಆಗಲಿ...ಆಗದಿರಲಿ. ನಾನು ಕೊನೆಯ ಬಾರಿ ಹೇಳಲು ಬಯಸುತ್ತೇನೆ. ನಾನದನ್ನು ಪುನರುಚ್ಚರಿಸುವುದಿಲ್ಲ. ಈ ದೇಶದಲ್ಲಿ ನನಗಿಂತ ದೊಡ್ಡ ದೇಶಪ್ರೇಮಿ ಇನ್ನೊಬ್ಬರಿಲ್ಲ ಎಂದ ಶಾರುಕ್,ನಮ್ಮ ದೇಶ,ನಮ್ಮ ತಾಯ್ನೊಡು,ಭಾರತ ಮಾತಾ...ನಾವೆಲ್ಲ ಅದನ್ನು ಪ್ರೀತಿಸುತ್ತೇವೆ. ಹೀಗಿರುವಾಗ ಇಂತಹ ವಿಷಯಗಳೆಲ್ಲ ಏಕೆ ಚರ್ಚೆಯಾಗುತ್ತಿವೆ? ವಿಶ್ವದಲ್ಲಿಯೇ ಅತ್ಯಂತ ಹೆಮ್ಮೆಯ ಭಾರತೀಯ ನಾನು. ಈ ದೇಶದಿಂದ ನನಗಿಂತ ಹೆಚ್ಚಿನದನ್ನು ಬೇರೆಯವರು ಪಡೆದಿಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News