ಭಟ್ಕಳ: ನೂತನ ಜಾಲಿ ಪ.ಪಂ ಚುನಾವಣೆ; 20ರಲ್ಲಿ 10 ಸ್ಥಾನಕ್ಕೆ ಅವಿರೋಧ ಖಚಿತ
ಭಟ್ಕಳ: ತಾಲೂಕಿನಲ್ಲಿ ನೂತನವಾಗಿ ರಚನೆಯಾದ ಜಾಲಿ ಪಟ್ಟಣ ಪಂಚಾಯತ್ ಚುನಾವಣೆ ಎ.24ರಂದುuÉ ನಡೆಯಲಿದ್ದು ಚುನಾವ ನಡೆಯಲಿರುವ 20 ಕ್ಷೇತ್ರಗಳಲ್ಲಿ 10 ಸ್ಥಾನ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದ್ದು ಇನ್ನುಳಿದ 10 ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿ 25 ಮಂದಿ ಆಯ್ಕೆ ಬಯಿಸಿ ಕಣದಲ್ಲಿದ್ದಾರೆ.
ಕಣದಲ್ಲಿರುವವರೆಂದರೆ ವಾರ್ಡ ನಂ.1ರಲ್ಲಿ ಕಾಂಗ್ರೆಸ್‌ನಿಂದ ಗೀತಾ ಆಲೂರ ಜೈನ್, ಬಿಜೆಪಿಯಿಂದ ನಾಡಾರ ಶೈಲಾ ಫ್ರೆಡ್ಡಿ, ವಾರ್ಡ ನಂ.2ರಲ್ಲಿ ಬಿಜೆಪಿಯಿಂದ ಕಮಲಾ ಲಕ್ಷ್ಮಣ ನಾಯ್ಕ, ಕಾಂಗ್ರೆಸ್‌ನಿಂದ ಶೋಭಾ ಶ್ರೀಧರ ನಾಯ್ಕ, ವಾರ್ಡ ನಂ.3ರಲ್ಲಿ ಬಿಜೆಪಿಯಿಂದ ಶ್ರೀಧರ ಮಾದೇವ ನಾಯ್ಕ, ಕಾಂಗ್ರೆಸ್‌ನಿಂದ ರಮೇಶ ಮಾದೇವ ನಾಯ್ಕ, ಪಕ್ಷೇತರರಾಗಿ ಮಹೇಶ ರಾಮಯ್ಯ ನಾಯ್ಕ, ಶಾಹಿದಾ ಶೇಖ್, ವಾರ್ಡ ನಂ. 8ರಲ್ಲಿ ಬಿಜೆಪಿಯಿಂದ ಗಣಪಯ್ಯ ಕರಿಯಾ ಗೊಂಡ, ಕಾಂಗ್ರೆಸ್‌ನಿಂದ ರಮೇಶ ಈರಯ್ಯ ಗೊಂಡ, ಪಕ್ಷೇತರರಾಗಿ ಮಂಜುನಾಥ ನಾಗಪ್ಪ ಗೊಂಡ, ವಾರ್ಡ ನಂ.9ರಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮೀ ಮಾದೇವ ನಾಯ್ಕ, ಬಿಜೆಪಿಯಿಂದ ಲಕ್ಷ್ಮೀ ಶನಿಯಾರ ನಾಯ್ಕ, ವಾರ್ಡ ನಂ. 10ರಲ್ಲಿ ಕಾಂಗ್ರೆಸ್‌ನಿಂದ ಈಶ್ವರ ಲಚ್ಮಯ್ಯ ಮೊಗೇರ, ಬಿಜೆಪಿಯಿಂದ ಪುರಂದರ ಕುಪ್ಪಾ ಮೊಗೇರ, ಪಕ್ಷೇತರರಾಗಿ ನಾರಾಯಣ ವಿ. ಶಿರೂರು, ವಾರ್ಡ ನಂ. 11ರಲ್ಲಿ ಕಾಂಗ್ರೆಸ್‌ನಿಂದ ನಾಗರಾಜ ಮಾದೇವ ನಾಯ್ಕ, ಬಿಜೆಪಿಯಿಂದ ವಿನಾಯಕ ಮಂಜುನಾಥ ಆಚಾರಿ, ವಾರ್ಡ ನಂ. 17ರಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಆದಂ ಪನಂಬೂರು, ಕೆ. ಸುಲೇಮಾನ್ ಮೊಹ್ಮದ್ ಸಾಬ್, ವಾರ್ಡ ನಂ. 19ರಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಐಷಾ ಮೊಹ್ಮದ್ ಅಲಿ, ಸೈಯ್ಯದ್ ರೇಶ್ಮಾ ಕಣದಲ್ಲಿದ್ದಾರೆ.
ಚುನಾವಣೆ ನಡೆಯುವ ಹತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ 7, ಬಿಜೆಪಿ 8 ಹಾಗೂ ಪಕ್ಷೇತರರು 10 ಸ್ಥಾನದಲ್ಲಿ ಸ್ಪರ್ಧಿಸಿದ್ದರೆ, ಜಾತ್ಯತೀತ ಜನತಾದಳ ಒಂದು ಕ್ಷೇತ್ರದಲ್ಲೂ ಕೂಡ ಸ್ಪರ್ಧೆ ಮಾಡದೇ ಇರುವುದು ವಿಶೇಷವಾಗಿದೆ. ಚುನಾವಣೆಯ ನಾಮಪತ್ರ ಹಿಂಪಡೆಯುವ ಅಂತಿಮ ದಿನದಂದು 10 ಕ್ಷೇತ್ರಗಳಲ್ಲಿ ಒಂದೊಂದೇ ಅಭ್ಯರ್ಥಿ ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ಖಚಿತವಾದವರು: ವಾರ್ಡ ನಂ. 5ರಲ್ಲಿ ಕಮರಿ ಬಿಲಾಲ್ ಅಹ್ಮದ್, ವಾರ್ಡ ನಂ. 6ರಲ್ಲಿ ಪರ್ಹಾನ್ ಇಕ್ಕೇರಿ, ವಾರ್ಡ ನಂ. 7ರಲ್ಲಿ ಸಿ. ಎಂ. ದೇವದಾಸ, ವಾರ್ಡ ನಂ. 12ರಲ್ಲಿ ಮಹ್ಮದ್ ಇಮ್ರಾನ್ ಸಯ್ಯದ್ ಅಲಿ, 13ನೇ ವಾರ್ಡಿನಲ್ಲಿ ಅಬ್ದುರ್ ರಹೀಂ ಶೇಖ, ವಾರ್ಡ ನಂ. 14ರಲ್ಲಿ ಶೇಖ ಮುಮ್ತಾಜ್ ಬೇಗಂ, ವಾರ್ಡ ನಂ. 15ರಲ್ಲಿ ಮೊಮಿನ್ ಶೈನಾಜ್ ಬೇಗಂ, 16ನೇ ವಾರ್ಡಿನಲ್ಲಿ ಅಪ್ತಾಬ್ ಹುಸೇನ್, 18ನೇ ವಾರ್ಡಿನಲ್ಲಿ ಶೇಖ ಶಮೀಮಾ ಬಾನು, ವಾರ್ಡ ನಂ. 20ರಲ್ಲಿ ಶೇಖ ಪಾತಿಮಾ ಮೆಹಬೂಬ ಡೌಲಾ ಸೇರಿದ್ದಾರೆ. ಆಯ್ಕೆಯಾದ ಬಹುತೇಕರು ಪಕ್ಷೇತರರೇ ಆಗಿದ್ದು ಇಲ್ಲಿನ ಪಟ್ಟಣ ಪಂಚಾಯತ್‌ನಲ್ಲಿ ಪಕ್ಷೇತರರೇ ಮೇಲುಗೈ ಸಾಧಿಸುವುದು ಖಚಿತವಾಗಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಬ್ದುರ್ ರಹೀಂ ಶೇಖ, ಜಾಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಮೀಮಾ ಬಾನು ಹಾಗೂ ಮಾಜಿ ಅಧ್ಯಕ್ಷ ಸಿ. ಎಂ. ದೇವದಾಸ ಪಟ್ಟಣ ಪಂಚಾಯತ್‌ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.