ಭಟ್ಕಳ : ಇಲ್ಲಿನ ಮುಸ್ಲೀಂ ಯುತ್ ಫೆಡರೇಶನ್ ವತಿಯಿಂದ ಕೋಲಾ ಮೈದಾನದಲ್ಲಿ ಎಪ್ರಿಲ್ 28 ಭಟ್ಕಳ ಕ್ರಿಕೆಟ್ ಲೀಗ್-3 ಆರಂಭ
ಭಟ್ಕಳ : ಇಲ್ಲಿನ ಮುಸ್ಲೀಂ ಯುತ್ ಫೆಡರೇಶನ್ ವತಿಯಿಂದ ಕೋಲಾ ಮೈದಾನದಲ್ಲಿ ಎಪ್ರಿಲ್ 28ರಿಂದ ಭಟ್ಕಳ ಕ್ರಿಕೆಟ್ ಲೀಗ್-3 ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಪ್ರಿಲ್ 21 ರಂದು ಬಂದರ ರಸ್ತೆಯ ಅಫ್ರಾ ಶಾಧಿ ಹಾಲ್‌ನಲ್ಲಿ ಆಟಗಾರರ ಬಿಡ್ ನಡೆಯಲಿದೆ. ಒಂದು ತಂಡಕ್ಕೆ 300 ಅಂಕ ಇದ್ದು, 16 ಆಟಗಾರರನ್ನು ಬಿಡ್ ಮಾಡಬಹುದಾಗಿದೆ. ಇದೊಂದು ಪಕ್ಕಾ ಐಪಿಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಮುಸ್ಲೀಂ ಯುತ್ ಫೆಡರೇಶನ್‌ನವರು ನಡೆಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಆಟಗಾರರು ನವಾಯತ್ ಕಾಲೋನಿಯ ವೈಎಮ್‌ಎಸ್‌ಎ ಕಚೇರಿಯಲ್ಲಿ ಎಪ್ರಿಲ್ 19ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದೂ ತಿಳಿಸಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಟ್ಕಳ ಮತ್ತು ಮಂಕಿ ಭಾಗದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಎಪ್ರಿಲ್ 27 ರಂದು ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 28ರಿಂದ ಪಂದ್ಯಾವಳಿ ಆರಂಭವಾಗಲಿದೆ ಎಂದೂ ತಿಳಿಸಲಾಗಿದೆ. 1991ರಲ್ಲಿ ಸ್ಥಾಪನೆಗೊಂಡ ಭಟ್ಕಳ ಮುಸ್ಲೀಂ ಯುತ್ ಫೆಡರೇಶನ್ ನವಾಯತ್ ಕಾಲೋನಿಯ ತಾಲ್ಲೂಕು ಕ್ರೀಡಾಂಗಣದ ಬಳಿ ತನ್ನ ಕಚೇರಿ ಹೊಂದಿದ್ದು, ಯುವಕರಲ್ಲಿ ಶಿಕ್ಷಣ, ಕ್ರೀಡೆಗೆ ಪ್ರೋತ್ಸಾಹಿಸುತ್ತಿದೆ. ಎಪ್ರಿಲ್ 28ರಂದು ಆರಂಭವಾಗುವ ಬಿಸಿಎಲ್-3 ಕ್ರಿಕೆಟ್ ಪಂದ್ಯಾವಳಿ ನಿಮಿತ್ತ ಪೋಸ್ಟರ್ ಕೂಡ ಬಿಡುಗಡೆ ಕಾರ್ಯಕ್ರಮ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಪೋಸ್ಟರ್ ಬಿಡಗಡೆ ಕಾರ್ಯಕ್ರಮದಲ್ಲಿ ಫೆಡರೇಶನ್ ಅಧ್ಯಕ್ಷ ಇಮ್ತಿಯಾಜ್ ಉದ್ಯಾವರ, ಕಾರ್ಯದರ್ಶಿ ನಸೀಪ್ ಖಲೀಪಾ, ರಯ್ಯೀಸ್ ರುಕ್ನುದ್ದೀನ್, ಮೊಹ್ಮದ್ ಹುಸೇನ್, ಅತೀಕ್ ಕೋಲಾ, ಶಮೂನ್ ಹಾಜಿ ಪಕ್ಕಿ, ಅಬ್ದುಲ್ ಸಮೀ ಮುಂತಾದವರಿದ್ದರು.