ನಾಳೆ ಸೊಸೈಟಿ ಉದ್ಘಾಟನೆ
Update: 2016-04-17 23:32 IST
ಕಾಸರಗೋಡು, ಎ.17: ಕಾಸರಗೋಡು ಸಹಕಾರಿ ವಲಯದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಬೇಳ ಪಬ್ಲಿಕ್ ವೆಲ್ಫೇರ್ ಕೋ ಅಪರೇಟಿವ್ ಸೊಸೈಟಿಯ ಉದ್ಘಾಟನೆ ಎ.19ರಂದು ನಡೆಯಲಿದೆ.
ಸಂಜೆ 4 ಗಂಟೆಗೆ ಬೇಳಯಾತ್ರಿ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸುವರು. ಬೇಳ ಧರ್ಮ ಕೇಂದ್ರದ ಧರ್ಮಗುರು ವಂ. ವಿನ್ಸೆಂಟ್ ಡಿಸೋಜ ಆಶೀರ್ವಚನ ನೀಡುವರು. ಕಾಸರಗೋಡು ಸಹಕಾರಿ ಉಪನಿರ್ದೇಶಕ ಕೆ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.