×
Ad

ಐತಿಹಾಸಿಕ ಪರಂಪರೆ ಉಳಿಸಲು ಕಾರ್ಯಕ್ರಮ

Update: 2016-04-17 23:35 IST

ಶಿರ್ವ, ಎ.17: ಇಲ್ಲಿನ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿನ ಚರಿತ್ರೆ ಮತ್ತು ಪುರಾತತ್ವ ವಿಭಾಗದ ವತಿಯಿಂದ ಶಿರ್ವ ನಡಿಬೆಟ್ಟುವಿನ ಪ್ರಾಚೀನ ಪರಂಪರೆಯ ಗುತ್ತಿನ ಮನೆಯ ಚಾವಡಿಯಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿದ್ವಾಂಸ ಪ್ರೊ. ಟಿ. ಮುರುಗೇಶಿ ಮಾತನಾಡಿ, ನಡಿಬೆಟ್ಟುವಿನ ಕಲಾತ್ಮಕವಾದ ಪ್ರಾಚೀನ ಪರಂಪರೆಯ ಗುತ್ತಿನ ಮನೆ ಸಮುದಾಯದ ಚಾರಿತ್ರಿಕ ಸೃಷ್ಠಿಯಾಗಿದ್ದು, ಪ್ರಾದೇಶಿಕ ಸಂಸ್ಕೃತಿಯ ದ್ಯೋತಕವಾಗಿದೆ ಎಂದರು. ಪ್ರಾಂಶುಪಾಲ ಪ್ರೊ. ವಿನೋಬ್‌ನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ನಡಿಬೆಟ್ಟು ಮನೆಯ ಸೀತಾರಾಮ ಹೆಗ್ಡೆ ಕಾರ್ಯಕ್ರಮ ಪ್ರಾಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News