ಡಿಕೆಎಸ್‌ಸಿ ಯೂತ್‌ವಿಂಗ್‌ಗೆ ಪದಾಧಿಕಾರಿಗಳ ಆಯ್ಕೆ
ಯುಎಇ, ಎ.17: ಡಿಕೆಎಸ್‌ಸಿ ಯೂತ್‌ವಿಂಗ್ ಯುಎಇ ಸಮಿತಿಯ 6ನೆ ವಾರ್ಷಿಕ ಮಹಾಸಭೆಯು ಮುಕ್ತಾರ್ ಅಲಿ ಅಧ್ಯಕ್ಷತೆಯಲ್ಲಿ ದೇರಾ ಶಕೂರ್ ಮನಿಲಾರ ನಿವಾಸದಲ್ಲಿ ನಡೆಯಿತು.
ರಾಷ್ಟೀಯ ಸಮಿತಿ ಉಪಾಧ್ಯಕ್ಷ ಇಬ್ರಾಹೀಂ ಹಾಜಿ ಕಿನ್ಯ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನಾ ಕಾರ್ಯದರ್ಶಿ ಕಮಾಲ್ ಅಜ್ಜಾವರ ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪರಿಶೋಧಕ ರಿಯಾಝ್ ಕಿನ್ಯ ಲೆಕ್ಕಪತ್ರ ಮಂಡಿಸಿದರು. ಯೂತ್‌ವಿಂಗ್ ಅಧ್ಯಕ್ಷ ಮುಕ್ತಾರ್ ಅಲಿ ಅರಂತೋಡು ಅಧ್ಯಕ್ಷೀಯ ಭಾಷಣ ಮಾಡಿದರು.
ರಾಷ್ಟ್ರೀಯ ಸಮಿತಿ ವತಿಯಿಂದ ಉಸ್ತುವಾರಿಯಾಗಿ ಆಗಮಿಸಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇನ ಹಿರಿಯ ಮುಖಂಡ ಇ.ಕೆ. ಇಬ್ರಾಹೀಂ ಕಿನ್ಯ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಅಧ್ಯಕ್ಷರಾಗಿ ಸೈಫುದ್ದೀನ್ ಪಟೇಲ್ ಸುಳ್ಯ, ಉಪಾಧ್ಯಕ್ಷರಾಗಿ ಕಮಾಲ್ ಅಜ್ಜಾವರ ಮತ್ತು ಅನ್ಸಾರ್ ಕುರ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಜುಬೈರ್ ಆತೂರು, ಜೊತೆ ಕಾರ್ಯದರ್ಶಿಯಾಗಿ ಹಸನ್ ಉಚ್ಚಿಲ ಮತ್ತು ಸನವಾಝ್ ಕಿನ್ಯ, ಕೋಶಾಧಿಕಾರಿಯಾಗಿ ಮುಕ್ತಾರ್ ಅಲಿ ಅರಂತೋಡು, ಲೆಕ್ಕ ಪರಿಶೋಧಕರಾಗಿ ರಿಯಾಝ್ ಕಿನ್ಯ, ಸಂಘಟನಾ ಕಾರ್ಯದರ್ಶಿಯಾಗಿ ಜಮಾಲ್ ಬಜ್ಪೆ ಆಯ್ಕೆಯಾದರು.
ದೇರಾ ಶಾಖೆಯ ಜೊತೆ ಕಾರ್ಯದರ್ಶಿ ರಫೀಕ್ ಸಂಪ್ಯ , ರಾಷ್ಟೀಯ ಸಮಿತಿ ಸದಸ್ಯ ಅಬ್ದುರ್ರಝಾಕ್ ಮುಟ್ಟಿಕಲ್ ಶುಭ ಹಾರೈಸಿದರು. ಅಬ್ಬಾಸ್ ಪಾಣಾಜೆ, ಶರೀಫ್ ಅರ್ಲಪದವು, ಶೇಕಬ್ಬ ಕಿನ್ಯ ಉಪಸ್ಥತರಿದ್ದರು.