×
Ad

‘ಮಾನವೀಯ ವೌಲ್ಯ ಬೆಳೆಸುವ ಕೆಲಸವಾಗಬೇಕಿದೆ’

Update: 2016-04-17 23:38 IST


ಕೊಣಾಜೆ, ಎ.17: ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಂಬಿಕೆಯ ಕೊರತೆಯಿಂದಾಗಿ ಮನುಷ್ಯ ಮನುಷ್ಯ ನನ್ನು ನಂಬುವುದೇ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ನಾವು ನಮ್ಮ ಸಾಂಪ್ರದಾಯಿಕ ಆಚ ರಣೆಗಳ ಮಹತ್ವವನ್ನು ತಿಳಿದುಕೊಂಡು ಸಂಸ್ಕೃತಿಯನ್ನು ಹಾಗೂ ಮಾನವೀಯ ವೌಲ್ಯಗಳನ್ನು ಬೆಳೆಸುವಂತಹ ಕೆಲಸವಾಗಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾ ಯಪಟ್ಟರು.
ಅಸೈಗೋಳಿಯ ಸಾಯಿ ಫ್ರೆಂಡ್ಸ್‌ನ 5ನೆ ವಾರ್ಷಿಕೋತ್ಸವ ಹಾಗೂ ಬಿಸು ಪರ್ಬದ ಆಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾ ಡಿದರು.
ಕಾರ್ಯಕ್ರಮವನ್ನು ಕಿರುತೆರೆ ಬಾಲನಟಿ ಬೇಬಿ ದಿಶಾಲಿ ಡಿ.ಪೂಜಾರಿ ವಹಿಸಿದ್ದರು. ಈ ಸಂದರ್ಭ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಡಾ.ಕೃಷ್ಣಪ್ರಸಾದ್, ನಿವೃತ್ತ ಶಿಕ್ಷಕ ಡೆನ್ನಿ ಡಿಸೋಜ ಹಾಗೂ ನವ್ಯಶ್ರೀ ಸ್ತ್ರೀಶಕ್ತಿ ಸಂಘದ ಸದಸ್ಯರನ್ನುನ್ನು ಸನ್ಮಾನಿಸಲಾಯಿತು.
ದ.ಕ.ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಮಿಥುನ್ ರೈ, ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಆಲಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನ ಸಂತೋಷ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್‌ನ ಉಳ್ಳಾಲ ವಲಯಾಧ್ಯಕ್ಷ ನಝರ್ ಷಾ ಪಟ್ಟೋರಿ, ಉದ್ಯಮಿ ಪ್ರಸಾದ್ ರೈ ಕಲ್ಲಿಮಾರ್, ಕಿಶೋರ್ ಪೂಜಾರಿ, ರಮಾನಾಥ ಶೆಟ್ಟಿ, ಮಂಜುನಾಥ ಸಾಮಾನಿ, ರಾಜ್ ಕುಮಾರ್, ಸಿ.ಎಂ.ರವೂಫ್, ಭಾಸ್ಕರ್, ಆಸ್ಟಿನ್ ಡಿಸೋಜ, ಸುನೀಲ್ ಪೂಜಾರಿ, ಮುಸ್ತಫಾ ಹರೇಕಳ, ರೇಣು ಬೆಂಗಳೂರು, ಶಶಿರಾಜ್ ಕೊಳಂಬೆ, ಶ್ರೀನಿವಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ವಿಕಲಚೇತನ ಮಕ್ಕಳಿಗೆ ಗಾಲಿಕುರ್ಚಿಗಳನ್ನು ವಿತರಿಸಲಾಯಿತು. ಪ್ರಭಾಕರಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News