ಉಡುಪಿ: ಅಂಬೇಡ್ಕರ್ ಕುರಿತ ಪುಸ್ತಕ ಪ್ರದರ್ಶನ
ಉಡುಪಿ, ಎ.17: ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇ ಡ್ಕರ್‌ರ 125ನೆ ಜನ್ಮದಿನಾಚರಣೆ ಪ್ರಯಕ್ತ ಉಡುಪಿ ನಗರ ಕೇಂದ್ರ ಗ್ರಂಥಾಲಯದ ದೊಡ್ಡಣಗುಡ್ಡೆ ಶಾಖಾ ಗ್ರಂಥಾಲಯದಲ್ಲಿ ನಡೆದ ಪುಸ್ತಕ ಪ್ರದರ್ಶನವನ್ನು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಮೇಟಿ ಮುದಿ ಯಪ್ಪಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಮಾಜದ ಜನರ ನಡುವೆ ಸಹಜ ಜೀವನದ ಬೇರುಗಳು ಗಟ್ಟಿಗೊಳ್ಳಬೇಕು. ಈ ಮೂಲಕ ಸಾಮಾಜಿಕ ಸಂಬಂಧಗಳು ಬೆಸೆಯಬೇಕು ಎಂಬ ಚಿಂತನೆ ಡಾ.ಅಂಬೇಡ್ಕರ್ ಅವರದ್ದಾಗಿತ್ತು. ಆದರೆ ಇಂದು ಜಾತಿ, ರಾಜಕಾರಣಗಳಲ್ಲಿ ಹಂಚಿಹೋಗಿರುವ ನಮ್ಮ ಸಮಾಜದಲ್ಲಿ ಅಪವೌಲ್ಯಗಳೇ ಹೆಚ್ಚಿವೆ ಎಂದು ವಿಷಾದಿಸಿದರು.
ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಹೆಚ್ಚಿನ ಅನು ಕೂಲ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಸರಿಯಲ್ಲ. ಅವರು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ದ್ದಾರೆ. ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ. ಅಂಬೇಡ್ಕರ್ ತಮ್ಮ ಉದಾತ್ತ ಚಿಂತನೆಗಳ ಮೂಲಕ ವಿಶ್ವಮಾನವರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಣಗುಡ್ಡೆ ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು. ದೊಡ್ಡಣಗುಡ್ಡೆ ಕರ್ನಾಟಕ ಗೃಹ ಮಂಡಳಿ ನಿವಾಸಿಗರ ಸಂಘದ ಅಧ್ಯಕ್ಷ ವಿಠಲ ಗಾಣಿಗ ಉಪಸ್ಥಿತರಿದ್ದರು.
ಉಡುಪಿ ನಗರಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಜಯಶ್ರೀ ಎಂ. ಸ್ವಾಗತಿಸಿದರು. ಗ್ರಂಥಾಲಯದ ಮೇಲ್ವಿಚಾರಕಿ ಸುಲೇಖಾ ವಂದಿಸಿದರು.