ದೊಡ್ಡಣಗುಡ್ಡೆ: ಮನೆ ಹಸ್ತಾಂತರ
Update: 2016-04-17 23:45 IST
ಉಡುಪಿ, ಎ.17: ದೊಡ್ಡಣಗುಡ್ಡೆ ವಿಷ್ಣುಮೂರ್ತಿ ಫ್ರೆಂಡ್ಸ್‌ನ ದಶಮಾನೋತ್ಸದ ಪ್ರಯುಕ್ತ ದೊಡ್ಡಣಗುಡ್ಡೆ ಜಲಜಾ ಕುಂದರ್‌ರಿಗೆ ಆದಿತಿ ಬಿಲ್ಡರ್ ಮಾಲಕರು ನಿರ್ಮಿಸಿ ಕೊಟ್ಟ ಮನೆಯನ್ನು ಶಾಸಕ ಪ್ರಮೋದ್ ಮಧ್ವರಾಜ್ ಹಸ್ತಾಂತರಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಆರ್.ಕೆ.ರಮೇಶ, ಸೆಲೀನಾ ಕರ್ಕಡ, ಸತೀಶ ಪುತ್ರನ್, ವಿಠಲ್ ಗಾಣಿಗ, ಸದಾನಂದ ಶೆಟ್ಟಿ, ಹಂಝ ಹೆಜಮಾಡಿ, ನಿತಿನ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಜಿಲ್ಲಾ ಲಯನ್ಸ್ ಗವರ್ನರ್ ಶ್ರೀಧರ್ ಶೇಣವ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತದಾನಿಗಳಿಂದ 160 ಯೂನಿಟ್ ರಕ್ತವನ್ನು ಸಂಗ್ರಹಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ನೀಡಲಾಯಿತು.