ಪುತ್ತೂರು: ಚತುಷ್ಪಥ ರಸ್ತೆಯನ್ನಾಗಿಸಲು ಮನವಿ
Update: 2016-04-17 23:52 IST
ಪುತ್ತೂರು, ಎ.17: ಇಲ್ಲಿನ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ ಕೋರ್ಟು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಕನ್ನಡ ಸೇನೆ ಸಂಘಟನೆಯ ಪದಾಧಿಕಾರಿಗಳು ಪುತ್ತೂರು ಉಪ ವಿಭಾಗಾ ಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಎ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಅಡೂರು, ಪ್ರಧಾನ ಕಾರ್ಯದರ್ಶಿ ಕೆ.ಪಿ.ಇಬ್ರಾಹೀಂ, ಉಪಾಧ್ಯಕ್ಷ ಉಸ್ಮಾನ್ ಕೂರ್ನಡ್ಕ, ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಚಂದ್ರ ಶೇಖರ್ ಬಿ.ಎಲ್., ಸಂಘಟನೆಯ ಪ್ರಮುಖರಾದ ಪಿ.ಧರ್ಣಪ್ಪಗೌಡ, ಬಪ್ಪಳಿಗೆ ರಫೀಕ್, ಸುಂದರ, ರಫೀಕ್ ಕುಂಜೂರುಪಂಜ ನಿಯೋಗದಲ್ಲಿದ್ದರು.