ಅಮೇರಿಕಾದ ಪ್ರತಿಷ್ಟಿತ ನಾಸಾ ತರಬೇತಿ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದ ಮಂಗಳೂರಿನ ತಸ್ದೀಕ್

Update: 2016-04-18 10:08 GMT

ಇತ್ತೀಚಿಗೆ ಅಮೇರಿಕಾದ ಅಲಬಾಮದಲ್ಲಿ, ನಾಸಾ  U.S .SPACE  ACADEMY  WINGS  ಅಧೀನದಲ್ಲಿ ಆಯೋಜಿಸಲ್ಪಟ್ಟ  U.S .SPACE  AND  ROCKETRY  PROGRAMME  ತರಬೇತು ಶಿಬಿರದಲ್ಲಿ ವಿಶೇಷ  ಅಭ್ಯರ್ಥಿಯಾಗಿ  ಪಾಲ್ಗೊಳ್ಳಲು ಆರಿಸಲ್ಪಟ್ಟ ವಿದ್ಯಾರ್ಥಿಗಳಲ್ಲಿ UAE ಯಿಂದ ಆರಿಸಲ್ಪಟ್ಟ ಮಾಸ್ಟರ್ ತಸ್ದೀಕ್ ಅಬ್ದುಲ್ ರಝಾಕ್  ಪ್ರಥಮ ಪದಕವನ್ನು ಪಡೆದಿದ್ದಾನೆ  .

ಈ ಪ್ರತಿಭಾವಂತ ಬಾಲಕ ದುಬೈಯ ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಮಾಜಿ ಉಪಾದ್ಯಕ್ಷರೂ, ಕರ್ನಾಟಕ ಸಂಘ ಶಾರ್ಜಾ ಇದರ ಪ್ರಧಾನ ಕಾರ್ಯದರ್ಶಿಗಳೂ ಹಾಗೂ ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ದೀವಾ ಅಬ್ದುಲ್ ರಜಾಕ್ ಎಂದೇ  ಸಾಮಾಜಿಕ ರಂಗದಲ್ಲಿ  ಚಿರಪರಿಚಿತರಾಗಿರುವ ಅನಿವಾಸಿ ಕನ್ನಡಿಗ ಅಬ್ದುಲ್ ರಝಾಕ್ ಇಸ್ಮಾಯಿಲ್ (ದೀವಾ) ಮತ್ತು ವಹೀದ ಅಬ್ದುಲ್ ರಝಾಕ್ ಅವರ ಹೆಮ್ಮೆಯ ಕಿರಿಯ ಪುತ್ರ.ಹಾಗೂ ದುಬೈ ವೆಸ್ಟ್ ಮಿನಿಸ್ಟರ್ ಸ್ಕೂಲ್ ನಲ್ಲಿ O'ಲೆವೆಲ್ 11ನೆ ತರಗತಿ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News