ಕಡಬ : ಜಾತ್ರೋತ್ಸವ ಪ್ರಯುಕ್ತ 'ಪರವ ಕಾವಡಿ' ಮೆರವಣಿಗೆ
Update: 2016-04-18 17:24 IST
ಕಡಬ, ಎ.18. ಸಮೀಪದ ಕಲ್ಲಾಜೆ ಶ್ರೀರಾಮ ದೇವಸ್ಥಾನದ ಮುತ್ತುಮಾರಿಯಮ್ಮನವರ 23ನೇ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಮರ್ಧಾಳ ಪೇಟೆಯ ಈಶ್ವರ ಕಟ್ಟೆಯ ಬಳಿಯಿಂದ ಕಲ್ಲಾಜೆ ದೇವಸ್ಥಾನದವರೆಗೆ ’ಪರವ ಕಾವಡಿ’ ಮೆರವಣಿಗೆಯು ಬಹಳ ವಿಜೃಂಭಣೆಯಿಂದ ಜರಗಿತು. ಮೆರವಣಿಗೆಯಲ್ಲಿ ಕಲ್ಲಾಜೆ ಶ್ರೀರಾಮ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣನ್ ಎಂಬವರು ತನ್ನ ದೇಹದ ಹಿಂಬದಿಗೆ ಅಲ್ಲಲ್ಲಿ ಕಬ್ಬಿಣದ ಸರಳುಗಳಿಂದ ಚುಚ್ಚಿಸಿಕೊಂಡು ತಮಿಳುನಾಡಿನಿಂದ ತರಿಸಿದ್ದ ವಿಶೇಷ ವಾಹನದಲ್ಲಿ ಸುಮಾರು 2 ಕಿ.ಮೀ. ಪರವ ಕಾವಡಿ ಹಾರುವುದರ ಮೂಲಕ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಸಿದರು.