×
Ad

ವಿಷ ಸೇವಿಸಿ ಆತ್ಮಹತ್ಯೆ

Update: 2016-04-18 19:17 IST

ಉಪ್ಪಿನಂಗಡಿ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯಲ್ಲಿ ನಡೆದಿದೆ.
ಇಲ್ಲಿನ ಬಲ್ಯಾರಬೆಟ್ಟು ನಿವಾಸಿ ರಾಮಕೃಷ್ಣ ಗೌಡ (52) ಮೃತ ವ್ಯಕ್ತಿ. ಇಂದು ಬೆಳಗ್ಗೆ ಮನೆಯಂಗಳದಲ್ಲಿ ವಾಂತಿ ಮಾಡಿಕೊಂಡ ಇವರು ಕೆಳಗೆ ಕುಸಿದು ಬಿದ್ದರೆನ್ನಲಾಗಿದ್ದು, ಕೂಡಲೇ ಮನೆ ಮಂದಿ ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ. ಪಾರ್ಶ್ವ ವಾಯುವಿನಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರ ಪುತ್ರ ಚರಣ್ ಎಂಬಾತ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News