ಬೆಳ್ತಂಗಡಿ : ಎ. 30: ಬೆಳ್ತಂಗಡಿಯಲ್ಲಿ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ
ಬೆಳ್ತಂಗಡಿ : ಉತ್ಸಾಹಿ ಯುವಕ ಮಂಡಲ ಲಾಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ದ.ಕ., ಉಡುಪಿ ಹಾಗೂ ಕೊಡಗು ಅಂತರ್ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬ್ಬಡಿ ಪಂದ್ಯಾಟ ಉತ್ಸಾಹಿ-ವರುಣ್ ಟ್ರೋಫಿ 2016 ಹಾಗೂ ಬೃಹತ್ ರಕ್ತದಾನ ಶಿಬಿರ ಮತ್ತು ಸಾಂಸ್ಕೃತಿಕ ವೈಭವ ಎ. 30 ರಂದು ಲಾಲ ಪಡ್ಲಾಡಿ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ಗಿರೀಶ್ ಡೋಂಗ್ರೆ ಹೇಳಿದ್ದಾರೆ. ಅವರು ಸೋಮವಾರ ವಾರ್ತಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದುಸುಮಾರು20 ಆಹ್ವಾನಿತ ತಂಡಗಳು ಭಾಗವಹಿಸುತ್ತದೆ. ಈಗಾಗಲೇ ತಾಲೂಕಿನಿಂದ 6 ತಂಡ, ಕೊಡಗು ಜಿಲ್ಲೆಯಿಂದ 2 ತಂಡ, ಉಡುಪಿ 2 ತಂಡ ಹಾಗೂ ಮಂಗಳೂರಿನಿಂದ 6 ತಂಡಗಳು ಭಾಗವಹಿಸುವ ಬಗ್ಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ವಿಜೇತ ತಂಡಕ್ಕೆ ರೂ 33,333, ದ್ವಿತೀಯ ಸ್ಥಾನ ರೂ 22,222, ತೃತೀಯ ಹಾಗು ನಾಲ್ಕನೇ ಸ್ಥಾನದ ತಂಡಗಳಿಗೆ ತಲಾ ರೂ 11,111 ಬಹುಮಾನಗಳನ್ನು ಹಾಗೂ ಫಲಕಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು. ಅದೇ ದಿವಸ ಬೆಳಿಗ್ಗೆ ಉತ್ಸಾಹಿ ಯುವಕ ಮಂಡಲ ಲಾಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ, ಗ್ರಾ. ಪಂ. ಲಾಲ, ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಮಂಗಳೂರು, ಭಾರತೀಯ ರೆಡ್‌ಕ್ರಾಸ್ ಸೋಸೈಟಿ ಪುತ್ತೂರು ಹಾಗೂ ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಿದ್ದು ಜನಪದ ಕಲಾವಿದ ಹೆಚ್. ಕೃಷ್ಣಯ್ಯ ಲಾಲ, ಏಕಲವ್ಯ ಪ್ರಶಸ್ತಿ ವಿಜೇತ ಉದಯ ಚೌಟ, ಸಮಾಜ ಸೇವಕ ರುಕ್ಮಯ್ಯ ಕನ್ನಾಜೆ, ಉರಗ ಪ್ರೇಮಿ ಅಶೋಕ್ ನಿನ್ನಿಕಲ್ಲು, ಜೂನಿಯರ್ ನ್ಯಾಷನಲ್ ಕಬಡ್ಡಿ ಆಟಗಾರರಾದ ಮಹಮ್ಮದ್ ಅಕ್ರಮ್, ಮಹಮ್ಮದ್ ಸಿನಾನ್, ನಶಾದುದ್ದೀನ್, ಹಿರಿಯ ಕಬ್ಬಡ್ಡಿ ಆಟಗಾರ ಡ್ಯಾನಿ ಇವರನ್ನು ಸನ್ಮಾನಿಸಲಾಗುವುದು. ವಿಶೇಷ ಆಹ್ವಾನಿತರಾಗಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷ ವಿಲ್ಸನ್ ಸೋನ್ಸ್ ಪಡ್ಲಾಡಿ, ಉತ್ಸಾಹಿ ಯುವಕ ಮಂಡಲದ ಅಧ್ಯಕ್ಷ ಹರೀಶ್ ಎಲ್., ತಾಂತ್ರಿಕ ಸಮಿತಿ ಸಂಚಾಲಕ ಜಯರಾಜ್ ಜೈನ್ ಲಾಲ, ದ.ಕ. ಜಿಲ್ಲಾ ಅಮೇಚೂರು ಕಬಡ್ಡಿ ತೀರ್ಪುಗಾರರ ಮಂಡಳಿ ಸಂಚಾಲಕ ಫ್ರಾನ್ಸಿಸ್ ವಿ.ವಿ., ತಾಲೂಕು ಅಮೆಚೂರು ಕಬಡ್ಡಿ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಶೆಟ್ಟಿ, ಶೇಖರ್ ಲಾಲ ಉಪಸ್ಥಿತರಿದ್ದರು.