ಬೆಳ್ತಂಗಡಿ: ಮೃತದೇಹ ಪತ್ತೆ
Update: 2016-04-18 19:39 IST
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಹಳೆ ಸೇತುವೆಯ ಬಳಿ ಕೊಡಗು ಜಿಲ್ಲೆಯ ಶೂಂಟಿಕೊಪ್ಪ ಹೊಸಕೋಟೆ ನಿವಾಸಿ ಗುರುವಪ್ಪ ಪೂಜಾರಿ ಎಂಬವರ ಪುತ್ರ ಸುರೇಶ (38) ಎಂಬಾತನ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳಕ್ಕೆ ಬಂದು ನೇತ್ರಾವತಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ಈತ ಮೃತಪಟ್ಟಿರಬಹುದು ಎಂದು ಅಮದಾಜಿಸಲಾಗಿದೆ. ಆತನ ಡೈರಿಯಲ್ಲಿದ್ದ ದೂರವಾಣಿ ಸಂಖ್ಯೆಯನ್ನು ಗುರುತಿಸಿ ಆತನ ಗುರುತು ಪತ್ತೆ ಮಾಡಲಾಗಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.