ಕೊಹಿನೂರ್ ಭಾರತದ ಸೊತ್ತು
Update: 2016-04-18 20:49 IST
ಹೊಸದಿಲ್ಲಿ , ಎ. 18: ಕೊಹಿನೂರ್ ವಜ್ರ ಬ್ರಿಟನ್ ಗೆ ಕಳ್ಳತನದ ಮೂಲಕ ಅಥವಾ ಒತ್ತಡದಿಂದ ಹೋಗಿಲ್ಲ. ಅದನ್ನು ಉಡುಗೊರೆಯಾಗಿ ನೀಡಲಾಗಿದೆ. ಹಾಗಾಗಿ ಅದನ್ನು ವಾಪಸ್ ಪಡೆಯಲು ಭಾರತ ಸರಕಾರ ಕೇಳುವುದಿಲ್ಲ ಎಂದು ಸೋಮವಾರ ಕೇಂದ್ರ ಸರಕಾರ ಖಚಿತವಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. ಆದರೆ ಇದರ ಬೆನ್ನಿಗೇ ಆರೆಸ್ಸೆಸ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ಕೇಂದ್ರ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.
" ಕೊಹಿನೂರ್ ವಜ್ರ ಭಾರತದ ಸೊತ್ತು. ಹಾಗಾಗಿ ಅದು ಭಾರತದಲ್ಲಿ ಇರುವುದು ಮಹತ್ವಪೂರ್ಣ ಅವಶ್ಯಕತೆಯಾಗಿದೆ " ಎಂದು ಆರೆಸ್ಸೆಸ್ ನ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.