×
Ad

ಐದು ವರ್ಷದ ಮಗುವನ್ನು ಕಚ್ಚಿ ಕೊಂದು ಹಾಕಿ ದೂರಕ್ಕೆ ಎಳೆದೊಯ್ದ ಬೀದಿ ನಾಯಿಗಳು!

Update: 2016-04-19 11:31 IST

ಬರೇಲಿ , ಎಪ್ರಿಲ್ 19: ಫಿಲಿಬಿತ್ ಸ್ಥಳಿಯಾಡಳಿತ ಮತ್ತು ನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಬೀದಿನಾಯಿಗಳಿಗೆ ಮಗುವೊಂದು ಬಲಿಯಾದ ಘಟನೆ ವರದಿಯಾಗಿದೆ. ಸೋಮವಾರದಂದು ಐದೂವರೆಗಂಟೆಗೆ ಖಾಲಿ ಪ್ಲಾಟ್‌ನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಆಮಿರ್ ಎಂಬ ಐದು ವರ್ಷದ ಬಾಲಕನನ್ನು ಹನ್ನೆರಡಕ್ಕಿಂತಲೂ ಹೆಚ್ಚು ನಾಯಿಗಳು ಕಚ್ಚಿಕೊಂದು ಎಳೆದಾಡಿತ್ತು.

ಮಗುವಿನ ಸಾವಿನಿಂದ ಕೊಲಾಹಲವೇ ಉಂಟಾಗಿದೆ.ಪಿಲಿಬಿತ್ ಸಮೀಪದ ಚಟಿಯಾ ಮುಗಲ್‌ಖೇಡಾ ಗ್ರಾಮದ ಮುಹಮ್ಮದ್ ಝುಬೈರ್ ಸಫಲಿನಿ ಮೊಹಲ್ಲಾದಲ್ಲಿ ಮೂರು ವರ್ಷದಿಂದ ಬಾಡಿಗೆಮನೆಯಲ್ಲಿ ವಾಸಿಸುತ್ತಿದ್ದರು. ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಕಾರನ್ನು ಓಡಿಸುವ ಉದ್ಯೋಗವನ್ನು ಅವರು ಮಾಡುತ್ತಿದ್ದರು. ರವಿವಾರದಂದು ರಾತ್ರೆ ಯಾವುದೋ ಬಾಡಿಗೆಗೆ ಅವರು ಹೋಗಿದ್ದರು. ಮನೆಯಲ್ಲಿ ಅವರ ಪತ್ನಿಫರ್ಹಾನಾ ಐದುವರ್ಷದ ಮಗ ಮುಹಮ್ಮದ್ ಆಮಿರ್ ಮತ್ತು ಎರಡೂವರೆ ವರ್ಷದ ಮಗಳು ಉಮೈರಾ ಮಾತ್ರ ಇದ್ದರು. ಬೆಳೆಗ್ಗೆ ಐದೂವರೆಗಂಟೆಗೆ ಆಮಿರ್ ಎದ್ದು ಬಿಸ್ಕಿಟ್‌ಗೆ ಹಠಮಾಡಿದ್ದ ಫರ್‌ಹಾನ ಅದನ್ನು ದೊಡ್ಡ ವಿಷಯ ಮಾಡಿರಲಿಲ್ಲ.

ತಾಯಿ ಬಿಸ್ಕಿಟ್ ನಿರಾಕರಿಸಿ ಅಜ್ಜಿಯ ಮನೆಗೆ ಹೋಗುವ ಮಾತಾಡಿದ್ದರು. ಅವನು ಮೆಲ್ಲನೆ ಹೊರಬಂದು ಐವತ್ತು ಮೀಟರ್ ದೂರದ ಖಾಲಿ ಜಾಗದಲ್ಲಿ ಆಟವಾಡುತ್ತಿದ್ದ. ಅಲ್ಲಿಗೆ ನುಗ್ಗಿ ಬಂದ ನಾಯಿಗಳು ಮಗುವನ್ನು ಎಳೆದಾಡಿ ಕೊಂದು ಹಾಕಿ ದೂರಕ್ಕೆ ಒಯ್ದಿದೆ. ಮಗುವಿನ ಬೊಬ್ಬೆ ಕೇಳಿ ಜನರು ಬಂದಾಗ ಎಲ್ಲ ಕತೆಯೂ ಮುಗಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News