ಭಯಾನಕ ಭೂಕಂಪದ ಅಪಾಯದಲ್ಲಿ ಭಾರತ !

Update: 2016-04-19 06:09 GMT

ನವದೆಹಲಿ: ಇಕ್ವೇಡರ್‌ನಲ್ಲುಂಟಾದ ಪ್ರಬಲ ಭೂಕಂಪನಕ್ಕೆ ಕಾರಣವಾದ ಸಬ್ಡಕ್ಷನ್ ಪ್ರಕ್ರಿಯೆ ಹಿಮಾಲಯ ಪ್ರಾಂತ್ಯದ ಭೂಗರ್ಭದಲ್ಲಿಯೂ ನಡೆಯುತ್ತಿರುವುದರಿಂದಇಲ್ಲಿರುವ ಟೆಕ್ಟಾನಿಕ್ ಪ್ಲೇಟುಗಳುಚೀನಾ ಭೂಗರ್ಭದೊಳಗೆ ಪ್ರವೇಶಿಸುತ್ತಿದ್ದು ಇದರಿಂದುಂಟಾಗುವಒತ್ತಡದಿಂದ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಹಿಮಾಲಯ ಪ್ರದೇಶದ ಭೂಗರ್ಭದಲ್ಲಿ ಅಷ್ಟೊಂದು ಶಕ್ತಿ ಕೇಂದ್ರೀಕೃತವಾಗಿದೆಯೆಂದರೆ ಅಲ್ಲಿ ರಿಕ್ಟರ್ ಮಾಪಕದಲ್ಲಿ 8 ಅಥವಾ 9 ತೋರಿಸುವ ಪ್ರಬಲ ಭೂಕಂಪ ಯಾವಾಗ ಬೇಕಾದರೂ ಸಂಭವಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ.
ನೇಪಾಳ ಭೂಕಂಪಕ್ಕೂ ಇದೇ ಕಾರಣವಾಗಿದೆಯಾದರೂ ಅದು ಅಷ್ಟೊಂದು ಪ್ರಬಲವಾಗಿರಲಿಲ್ಲವೆಂಬುದು ವಿಜ್ಞಾನಿಗಳ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News