ವೆನ್ಲಾಕ್ ಆಸ್ಪತ್ರೆಯಲ್ಲಿ ನವೀಕೃತ ಪಿಸಿಯೋಥೆರಪಿ-ಡಿಇಐಸಿ ಉದ್ಘಾಟನೆ
ಮಂಗಳೂರು, ಎ.19: ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸುಸಜ್ಜಿತವಾಗಿ ನವೀಕರಿಸಿರುವ ಪಿಸಿಯೋಥೆರಪಿ ಮತ್ತು ಡಿಇಐಸಿ (ಡಿಸ್ಟ್ರಿಕ್ಟ್ ಅರ್ಲಿ ಇಂಟರ್‌ವೆನ್ಶನ್ ಸೆಂಟರ್) ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು.
ನವೀಕರಿಸಿರುವ ಪಿಸಿಯೋಥೆರಪಿ ಮತ್ತು ಡಿಇಐಸಿ ವಿಭಾಗವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ವೆನ್‌ಲಾಕ್‌ನ ಅಧೀಕ್ಷಕಿ ಹಾಗೂ ಜಿಲ್ಲಾ ಶಸಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್. ಕೆಎಂಸಿ ಡೀನ್ ಡಾ.ಎಂ.ವಿ.ಪ್ರಭು, ಪ್ರಮುಖರಾದ ಡಾ.ಸಲ್ದಾನ, ಪ್ರೊ.ಯು.ವಿ.ಶೆಣೈ, ಡಾ.ಬಾಲಕೃಷ್ಣ ರಾವ್, ಡಾ.ಲವೀನಾ, ಮುಹಮ್ಮದ್ ಕುಟ್ಟಿ, ಉಮಾ ರೈ, ಪೂರ್ಣಿಮಾ, ದೀಪ್ತಿ ಮೊದಲಾದವರು ಉಪಸ್ಥಿತರಿದ್ದರು.
ವೆನ್ಲಾಕ್‌ನ ಫಿಸಿಯೋಥೆರಪಿ ವಿಭಾಗ ರೋಟರಿ ಕ್ಲಬ್ ಸಹಯೋಗದೊಂದಿಗೆ 1965ರಲ್ಲಿ ಆರಂಭವಾಗಿತ್ತು. ಪ್ರಸ್ತುತ ಈ ವಿಭಾಗದಲ್ಲಿ ತುಂಬಾ ಹಳೆಯದಾದ ಉಪಕರಣಗಳಿದ್ದು, ಇದನ್ನು ಬದಲಾಯಿಸಿ. ರೋಟರಿ ಕ್ಲಬ್ ಅನುದಾನದಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಸುಸಜ್ಜಿತ ಕಟ್ಟಡವನ್ನು ಆರೋಗ್ಯ ರಕ್ಷಾ ಸಮಿತಿಯ ಅನುದಾನದಿಂದ ನಿರ್ಮಿಸಲಾಗಿದೆ. ಎಲೆಕ್ಟ್ರೋಥೆರಪಿಯಂತೆ ಮಂಡಿ, ಸೊಂಟ, ಭುಜ, ಕುತ್ತಿಗೆ ಇತ್ಯಾದಿ ನೋವುಗಳನ್ನು ಶಮನಗೊಳಿಸಲಾಗುತ್ತದೆ. ಜತೆಗೆ ಎಕ್ಸರ್‌ಸೈಸ್ ಥೆರಪಿಯಂತೆ ರೇಂಜ್ ಆ್ ಮೂವ್‌ಮೆಂಟ್, ಸ್ಟ್ರೆಂತ್, ಎಂಡ್ಯೂರೆನ್ಸ್ ಪಡೆಯಬಹುದು ಎಂದು ಡಾ.ರಾಜೇಶ್ವರಿ ದೇವಿ ಹೇಳಿದರು.