×
Ad

ಕೇರಳದಲ್ಲಿ ಎಸೆಸೆಲ್ಸಿ ಫಲಿತಾಂಶ ಎ.27ರೊಳಗೆ; ಪ್ಲಸ್ ಟು ಫಲಿತಾಂಶ ಮೇ 10ರೊಳಗೆ ಪ್ರಕಟ

Update: 2016-04-19 18:17 IST

ತಿರುವನಂತಪುರಂ, ಎಪ್ರಿಲ್ 19: ಕೇರಳದಲ್ಲಿ ಎಸೆಸೆಲ್ಸಿ ಫಲಿತಾಂಶ ಎಪ್ರಿಲ್ ಇಪ್ಪತ್ತೇಳರೊಳಗೆ ಮತ್ತು ಪ್ಲಸ್‌ಟು ಫಲಿತಾಂಶ ಮೇ ಹತ್ತರೊಳಗೆ ಪ್ರಕಟಗೊಳ್ಳಲಿದೆಯೆಂದುವರದಿಗಳು ತಿಳಿಸಿವೆ. ಮೌಲ್ಯಾಮಾಪನ ಪೂರ್ತಿಯಾಗಿದ್ದು ಎಸೆಸೆಲ್ಸಿಯ ಮಾರ್ಕ್ಸ್ ಪರಿಶೀಲನೆ ಪರೀಕ್ಷಾಭವನದಲ್ಲಿ ಬುಧವಾರ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

 ನಂತರ ಐಟಿ ಪರೀಕ್ಷೆಯ ಮಾರ್ಕ್ ನಿರಂತರ ಮೌಲ್ಯಮಾಪನದ ಮಾರ್ಕ್ಸ್, ಗ್ರೇಸ್ ಮಾರ್ಕ್ ಇವುಗಳನ್ನು ಫಲಿತಾಂಶದೊಂದಿಗೆ ಸೇರಿಸಲಾಗುವುದು. ಅಂತಿಮ ಪರಿಶೀಲನೆ ಎಪ್ರಿಲ್ ಇಪ್ಪತ್ತೈದರೊಳಗೆ ಪೂರ್ಣಗೊಳ್ಳಲಿದೆ. ಇದರ ನಂತರ ಪರೀಕ್ಷಾ ಪಾಸ್ ಬೋರ್ಡ್‌ನ ಸಭೆ ನಡೆಯಲಿದೆ. ಮೊಡರೇಶನ್‌ಗೆ ಕುರಿತು ಪಾಸ್‌ಬೋರ್ಡ್ ಸಭೆಯಲ್ಲಿ ತೀರ್ಮಾನಿಸಲಾಗುವುದು. ಆನಂತರ ಫಲಿತಾಂಶವನ್ನು ಪ್ರಕಟಿಸಲಾಗುವುದು. ಈ ಮೊದಲು ಎಪ್ರಿಲ್ 25ರೊಳಗೆ ಎಸೆಸೆಲ್ಸಿ ಫಲಿತಾಂಶವನ್ನು ಪ್ರಕಟಿಸುವ ಉದ್ದೇಶವನ್ನು ಇರಿಸಿಕೊಳ್ಳಲಾಗಿತ್ತು. ಆದರೆ ಸಮಯಾವಕಾಶವನ್ನು ಬಳಸಿ ಪರಿಶೀಲನೆ ಪೂರ್ತಿಗೊಳಿಸಿ ಫಲಿತಾಂಶವನ್ನು ಪ್ರಕಟಿಸುವುದೆಂದು ನಿರ್ಧರಿಸಿದ್ದರಿಂದ 26 ಅಥವಾ 27ಕ್ಕೆ ಫಲಿತಾಂಶ ಪ್ರಕಟಿಸುವುದೆಂದು ನಿರ್ಧರಿಸಲಾಯಿತು.

ಪ್ಲಸ್ ಟು ಎಪ್ರಿಲ್ 20ಕ್ಕೆ ಮೌಲ್ಯಮಾಪನ ಪೂರ್ತಿಗೊಳಿಸುವ ಉದ್ದೇಶ ಇರಿಸಲಾಗಿದೆ. ಒಂದೇ ಬಾರಿಗೆ ಮೌಲ್ಯಮಾಪನ ಮಾಡಬೇಕಾದ ವಿಷಯಗಳ ಮೌಲ್ಯಮಾಪನ ಪೂರ್ತಿಯಾಗಿದೆ ಎರಡು ಬಾರಿ ಮೌಲ್ಯಮಾಪನ ನಡೆಸಬೇಕಾದ ವಿಷಯಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಸಂಪೂರ್ಣವಾಗಿಲ್ಲ. ಶೇ. ಹತ್ತಕ್ಕೂ ಅಧಿಕ ವ್ಯತ್ಯಾಸ ಇರುವ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮೂರನೆ ಬಾರಿ ನಡೆಸಲಾಗುವುದು. ಹೀಗೆ ಮೇ ಐದು ಮತ್ತು ಹತ್ತರೊಳಗೆ ಫ್ಲಸ್ ಟು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News