ಬಂಟ್ವಾಳ: ಪಿಕಪ್ - ಕಾರು ನಡುವೆ ಅಪಘಾತ, ಕಾರು ಚಾಲಕನಿಗೆ ಗಾಯ, ಆಸ್ಪತ್ರೆಗೆ ದಾಖಲು
Update: 2016-04-19 20:27 IST
ಬಂಟ್ವಾಳ, ಎ. 19: ಕಾರು ಮತ್ತು ಪಿಕಪ್ ಜೀಪ್ ನಡೆವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಗಡಿಯಾರ್ ಮಸೀದಿ ಬಳಿ ಮಂಗಳವಾರ ಸಂಜೆ 5 ಗಂಟೆಯ ವೇಳೆಗೆ ಸಂಭವಿಸಿದೆ. ಇಲ್ಲಿನ ಪೆರ್ಲಾಪು ನಿವಾಸಿ ಅಬ್ದುಲ ಎಂಬವರ ಪುತ್ರ ಖಲೀಲ್ ಗಾಯಗೊಂಡ ಕಾರು ಚಾಲಕ. ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡಿಯಾರ್ ಮಸೀದಿ ಬಳಿ ಕಾರು ತಿರುಗಿಸುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಗುಜಿರಿ ಸಾಮಾನು ತುಂಬಿಕೊಂಡು ಬರುತ್ತಿದ್ದ ಪಿಕಪ್ ಜೀಪ್ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಿಕಪ್ ಚಾಲಕ ಯಾವುದೇ ಗಾಯಗಳಾದೆ ಅಪಾಯದಿಂದ ಪಾರಾಗಿದ್ದು, ಖಲೀಲ್ ಇತ್ತೀಚೆಗೆ ನಡೆದ ತನ್ನ ಸಹೋದರಿಯ ಮದುವೆ ಸಂದರ್ಭದಲ್ಲಿ ಈ ಕಾರನ್ನು ಬಾಡಿಗೆಗೆ ತೆಗೆದಿದ್ದರು ಎಂದು ತಿಳಿದು ಬಂದಿದೆ. ಘಟನೆಯಿಂದ ಕಾರು ಮತ್ತು ಪಿಕಪ್ ಜೀಪ್‌ಗೆ ಹಾನಿಯಾಗಿದೆ.