ಮತ್ತೊಬ್ಬ ಕ್ರಿಸ್ ಗೇಲ್ ಆಗಮನ !
Update: 2016-04-19 21:23 IST
ಹೊಸದಿಲ್ಲಿ , ಎ. 19: ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ಸ್ಪೋಟಕ ಬ್ಯಾಟ್ಸ್ ಮನ್ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ತಂದೆಯಾಗಿದ್ದಾರೆ !
ಗೇಲ್ ರ ಸಂಗಾತಿ ನತಾಶ ಬೆರಿಜ್ ಗಂಡು ಮಗುವಿಗೆ ಜನ್ಮ ನೀಡಿದ್ದು ಅವರನ್ನು ಭೇಟಿಯಾಗಲು ಗೇಲ್ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಬುಧವಾರದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಅವರು ಇರುವುದಿಲ್ಲ. ಇನ್ಸ್ಟಾ ಗ್ರಾಂ ನಲ್ಲಿ ತನ್ನ ಪುತ್ರನ ಚಿತ್ರ ಹಂಚಿಕೊಂಡು ಸಂಭ್ರಮಿಸಿರುವ ಗೇಲ್ " ನಾನು ಹೊರಟಿದ್ದೇನೆ ಬೇಬಿ " ಎಂದು ತನ್ನ ಸಂಗಾತಿಗೆ ಹೇಳಿದ್ದಾರೆ.
ಗೇಲ್ ತಂದೆಯಾಗಿದ್ದಾರೆ . ಅವರು ತಮ್ಮ ಪುತ್ರನನ್ನು ನೋಡಲು ಹೋಗಿದ್ದಾರೆ ಎಂದು ಬೆಂಗಳೂರು ತಂಡದ ಸರ್ಫ಼ರಾಝ್ ಖಾನ್ ಖಚಿತಪಡಿಸಿದ್ದಾರೆ.