×
Ad

ಮುಸ್ಲಿಂ ಕುಟುಂಬದ ನಾಗರಿಕತ್ವ ಪ್ರಕ್ರಿಯೆ ನಿಲ್ಲಿಸಿದ ಸ್ವಿಟ್ಝರ್‌ಲ್ಯಾಂಡ್

Update: 2016-04-20 08:47 IST

ಸ್ವಿಟ್ಝರ್‌ಲ್ಯಾಂಡ್: ಹದಿಹರೆಯದ ಇಬ್ಬರು ಮುಸ್ಲಿಂ ಯುವಕರು ತಮ್ಮ ಶಿಕ್ಷಕಿಯ ಕೈಕುಲುಕಲು ನಿರಾಕರಿಸಿದ್ದನ್ನೇ ನೆಪ ಮಾಡಿಕೊಂಡು ಎರಡು ಮುಸ್ಲಿಂ ಕುಟುಂಬಗಳ ನಾಗರಿಕತ್ವ ಪ್ರಕ್ರಿಯೆಯನ್ನು ಸ್ವಿಟ್ಝರ್‌ಲ್ಯಾಂಡ್ ಸರ್ಕಾರ ಸದ್ಯಕ್ಕೆ ತಡೆಹಿಡಿದಿದೆ.
ಕುಟುಂಬದ ನಾಗರಿಕತ್ವವನ್ನು ಸಹಜಗೊಳಿಸುವ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂದು ಬಾಸೆಲ್ ಕೌಂಟಿ ಅಧಿಕಾರಿಗಳು ಹೇಳಿದ್ದಾರೆ.
ಸ್ವಿಟ್ಝರ್‌ಲ್ಯಾಂಡ್ನ ಉತ್ತರ ಭಾಗದ ಥೆರ್ವಿಲ್ ಪಾಲಿಕೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದ 14 ಮತ್ತು 15 ವರ್ಷದ ಇಬ್ಬರು ವಿದ್ಯಾರ್ಥಿಗಳು, ಧಾರ್ಮಿಕ ಕಾರಣಗಳಿಗಾಗಿ ತಾವು ಕುಟುಂಬಕ್ಕೆ ಸೇರದ ಮಹಿಳೆಯರನ್ನು ಸ್ಪರ್ಶಿಸುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇ ಈ ಕಠಿಣ ನಿರ್ಧಾರಕ್ಕೆ ಕಾರಣ.
ಯೂರೋಪ್‌ನ ಈ ದೇಶದ ಶಾಲೆಗಳಲ್ಲಿ ತರಗತಿ ಆರಂಭಕ್ಕೆ ಮುನ್ನ ಹಾಗೂ ತರಗತಿ ಮುಗಿದ ಬಳಿಕ ಶಿಕ್ಷಕ/ ಶಿಕ್ಷಕಿಯರ ಕೈ ಕುಲುಕುವುದು ರೂಢಿ. ಈ ಇಬ್ಬರಿಗೆ ಇದುವರೆಗೆ ಈ ಕ್ರಮದಿಂದ ವಿನಾಯ್ತಿ ನೀಡಲಾಗಿತ್ತು. ಆದರೆ ಥೆರ್ವಿಲ್ ಅಧಿಕಾರಿಗಳು ಪುರುಷ ಶಿಕ್ಷಕರಿಗೆ ಹಸ್ತಲಾಘವ ನೀಡದಂತೆಯೂ ವಿದ್ಯಾರ್ಥಿಗಳಿಗೆ ಸೂಚಿಸಿದರು. ಲಿಂಗ ತಾರತಮ್ಯ ತಡೆಯುವ ಕ್ರಮವಾಗಿ ಈ ಸೂಚನೆ ನೀಡಲಾಗಿತ್ತು. ಆದರೆ ಈ ಕ್ರಮ ವಿವಾದಕ್ಕೆ ಕಾರಣವಾಗಿ, ಶಿಕ್ಷಣ ಸಚಿವರು, "ಹಸ್ತಲಾಘವ ನೀಡುವುದು ನಮ್ಮ ಸಂಸ್ಕೃತಿಯ ಭಾಗ; ಇದು ಕಡ್ಡಾಯ ಎಂದು ಸೂಚಿಸಿದ್ದರಿಂದ ವಿದ್ಯಾರ್ಥಿಗಳು ಎಲ್ಲ ಶಿಕ್ಷಕ/ ಶಿಕ್ಷಕಿಯರಿಗೂ ಹಸ್ತಲಾಘವ ನೀಡುವಂತೆ ಕಡ್ಡಾಯ ಮಾಡಲಾಗಿತ್ತು. ದೇಶದಲ್ಲಿ ಸುಮಾರು 3.5 ಲಕ್ಷ ಮುಸಲ್ಮಾನರಿದ್ದು, ಕೈಕುಲುಕುವ ವಿವಾದದ ಬಗ್ಗೆ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News