ಚಿತ್ತಾರಿಕಲ್‌ನಲ್ಲಿ ತಡರಾತ್ರಿ ರಸ್ತೆ ಬದಿಯಲ್ಲೇ ನಡೆಯಿತು ಕೊಲೆ
Update: 2016-04-20 09:00 IST
ಕಾಸರಗೋಡು, ಎ.20: ಚಿತ್ತಾರಿಕಲ್‌ನಲ್ಲಿ ವ್ಯಕ್ತಿಯೋರ್ವನ ಮೃತದೇಹ ಕೊಲೆಗೀಡಾದ ಸ್ಥಿತಿಯಲ್ಲಿ ಮಂಗಳವಾರ ತಡರಾತ್ರಿ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ.
ಕೊಲೆಗೀಡಾದವರನ್ನು ಕಂಬಲ್ಲೂರಿನ ಸತೀಶ್(50) ಎಂದು ಗುರುತಿಸಲಾಗಿದೆ.
ಮದ್ಯ ಸೇವನೆ ಬಗ್ಗೆ ಉಂಟಾದ ಮಾತಿನ ಚಕಮಕಿ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹದ ಬಳಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಚಿತ್ತಾರಿಕಾಲ್ ಪೊಲೀಸರು ಮೃತದೇಹವನ್ನು ಚಿತ್ತಾರಿಕಾಲ್ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ತನಿಖೆ ನಡೆಸುತ್ತಿದ್ದಾರೆ.