ಶ್ವಾಸ ಕಟ್ಟಿವಿಮಾನದಲ್ಲಿಯೇ ಮೃತವಾದ ನಾಲ್ಕು ತಿಂಗಳ ಹಸುಳೆ!
ಲಂಡನ್, ಎಪ್ರಿಲ್,20: ಲಂಡನ್‌ನಿಂದ ಹಾಂಕಾಗ್‌ಗೆ ಹಾರಾಟ ನಡೆಸುತ್ತಿದ್ದ ಕ್ಯಾಟಿ ಪೆಸಿಫಿಕ್ ಏರ್‌ವೇಸ್ ವಿಮಾನದಲ್ಲಿ ನಾಲ್ಕು ತಿಂಗಳ ಹಸುಳೆ ಶ್ವಾಸಕಟ್ಟಿ ಮೃತವಾಗಿದೆ ಎಂದು ವರದಿಯಾಗಿದೆ. ಮಗುವನ್ನು ರಕ್ಷಿಸಲಿಕ್ಕಾಗಿ ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬಂಧುಗಳ ಸಂದರ್ಶನಕ್ಕಾಗಿ ಮಗುವನ್ನು ಕರೆದುಕೊಂಡು ದಂಪತಿಗಳು ಹೊರಟಿದ್ದರು.
ಪ್ರಯಾಣದ ವೇಳೆ ಮಗುವಿಗೆ ಶ್ವಾಸ ಕಟ್ಟಿಬಂದು ಪ್ರಜ್ಞೆ ಕಳಕೊಂಡಿದೆ ಎಂದು ತಂದೆ ತಾಯಿ ತಿಳಿಸಿದ್ದರಿಂದ ವಿಮಾನವನ್ನು ಕಝಕ್‌ಸ್ತಾನದಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಅದಕ್ಕೂಮುಂಚೆ ವಿಮಾನದಲ್ಲಿದ್ದ ಓರ್ವ ನರ್ಸ್ ಶಿಶುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೂ ಪ್ರಯೋಜನವಾಗದ್ದರಿಂದ ಕಝಕ್‌ಸ್ತಾನದ ಅಥಾರಿಟಿ ಏರ್‌ಪೋರ್ಟ್‌ನಲ್ಲಿಇಳಿದಾಗ ಅಲ್ಲಿ ಪ್ಯಾರಮೆಡಿಕಲ್ ಸಿದ್ಧವಾಗಿತ್ತು. ಆದರೆ ಮಗು ಅಷ್ಟರಲ್ಲೇ ಮೃತವಾಗಿತ್ತು.
ಆನಂತರ ಮಗಳ ಮೃತದೇಹದೊಂದಿಗೆ ಹಾಂಗ್‌ಕಾಂಗ್‌ಗೆ ಪ್ರಯಾಣ ಬೆಳಸಲು ತಂದೆ ತಾಯಿ ನಿರ್ಧರಿಸಿದರು. ಪ್ರಯಾಣದ ನಡುವೆ ಅವರು ಭಾವನಾತ್ಮಕವಾಗಿ ಕುಸಿದು ಹೋಗಿದ್ದರೆನ್ನಲಾಗಿದೆ. ಜಾಸ್ಮಿನ ಮೃತ ಮಗುವಿನಹೆಸರು. 32 ವರ್ಷದ ಫ್ರೆಂಚ್ ವ್ಯಕ್ತಿ ಆ ಶಿಶುವಿನ ತಂದೆಯಾದರೆ. 36ವರ್ಷ ಪ್ರಾಯದ ಚೈನೀಸ್ ಸಂಜಾತೆ ಫ್ರೆಂಚ್ ಮಹಿಳೆ ಆ ಮಗುವಿನ ತಾಯಿಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಇಳಿದು ಚೀನಾದ ಹುನನ್ ಪ್ರಾಂತಕ್ಕೆ ಹೋಗಿ ಬಂಧುಗಳನ್ನು ಭೇಟಿಯಾಗುವ ಉದ್ದೇಶದಿಂದ ಅವರು ವಿಮಾನವನ್ನು ಹತ್ತಿದ್ದರು.