×
Ad

ನನ್ನ ಅಂತ್ಯ ಸಮೀಪಿಸಿದೆ, ಆದರೆ ನಮ್ಮ ಸಿದ್ಧಾಂತಗಳು ಶಾಶ್ವತ

Update: 2016-04-20 12:08 IST

ಹವಾನಾ : ಕ್ಯೂಬಾದಲ್ಲಿ ಅರ್ಧ ಶತಮಾನದ ಹಿಂದೆತಾನು ಅಧಿಕಾರಕ್ಕೆ ತಂದ ಕಮ್ಯುನಿಸ್ಟ್ ಪಕ್ಷಕ್ಕೆ ವಿದಾಯ ಭಾಷಣ ಮಾಡಿದ ಕ್ಯೂಬಾದ ಕ್ರಾಂತಿಕಾರ ನಾಯಕ ಫಿಡೆಲ್ ಕ್ಯಾಸ್ಟ್ರೋ ತನ್ನ ಅಂತ್ಯ ಸಮೀಪಿಸಿದ್ದು ಪಕ್ಷ ತನ್ನ ಸಿದ್ಧಾಂತಗಳನ್ನು ಶಾಶ್ವತಗೊಳಿಸುವುದಕ್ಕೆ ಸಹಕರಿಸಬೇಕು ಎಂದು ಹೇಳಿ ಭಾವನಾತ್ಮಕ ಭಾಷಣ ಮಾಡಿದರು.

‘‘ನನಗೆ ಶೀಘ್ರದಲ್ಲಿಯೇ 90 ವರ್ಷಗಳು ತುಂಬಲಿವೆ,’’ಎಂದು ಕ್ಯಾಸ್ಟ್ರೋ ತಾನು ಇತ್ತೀಚಿಗಿನ ವರ್ಷಗಳಲ್ಲಿಯೇ ನೀಡಿದ ದೀರ್ಘ ಸಾರ್ವಜನಿಕ ಭಾಷಣವೊಂದರಲ್ಲಿ ಹೇಳಿದರು. ‘‘ಶೀಘ್ರದಲ್ಲಿಯೇ ನಾನು ಎಲ್ಲರಂತಾಗಲಿದ್ದೇನೆ. ನಮಗೆಲ್ಲರಿಗೂವಿದಾಯ ಹೇಳುವ ಸಮಯ ಬರಲಿದೆ. ಆದರೆ ಕ್ಯೂಬಾದ ಕಮ್ಯುನಿಸ್ಟರ ಸಿದ್ಧಾಂತಗಳು ಸಾರ್ವಕಾಲಿಕವಾಗಬೇಕು ಹಾಗೂ ನಮ್ಮ ಉದ್ದೇಶಗಳನ್ನು ಈಡೇರಿಸಲು ನಾವೆಲ್ಲರೂ ಹೋರಾಡಬೇಕು,’’ಎಂದು ಹೇಳಿದರು.

ಕ್ಯೂಬಾದಕಮ್ಯುನಿಸ್ಟ್ ಪಕ್ಷದ ಅತ್ಯುನ್ನತ ಹುದ್ದೆಯನ್ನು ತನ್ನ ಸಹೋದರ ರಾವುಲ್ ಅವರು ವಹಿಸಿಕೊಳ್ಳುವುದಾಗಿಯೂ ಅವರು ಹೇಳಿದರು. ತಮ್ಮ ಕುಟುಂಬ ಮುಂದೆಯೂ ತಮ್ಮ ದೇಶದ ಮೇಲೆ ಹಿಡಿತವನ್ನುಅದರ ಆರ್ಥಿಕ ನಿರ್ವಹಣೆಯಿಂದ ಜನಸಾಮಾನ್ಯರಲ್ಲಿ ಅಸಮಾಧಾನ ಮೂಡಿಸಿರುವ ಹೊರತಾಗಿಯೂ, ಮುಂದುವರಿಸಿಕೊಂಡು ಹೋಗುವುದಾಗಿ ಫಿಡೆಲ್ ಕ್ಯಾಸ್ಟ್ರೋ ಭಾಷಣ ಮನದಟ್ಟು ಮಾಡಿದೆ.

ಈಗಾಗಲೇ ಕ್ಯೂಬಾದ ಯುವ ನಾಗರಿಕರು ತಮಗೆ ದೊರಕುತ್ತಿರುವ ತೀರಾ ಕಡಿಮೆ ವೇತನದಿಂದ ಜೀವನ ನಿರ್ವಹಣೆ ಅಸಾಧ್ಯವಾಗಿದೆಯೆಂದು ಸರಕಾರವನ್ನು ದೂರುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಸರಕಾರಿ ಸಂಸ್ಥೆಗಳುಹಲವು ಸಮಸ್ಯೆಗಳಿಂದ ಕಂಗಾಲಾಗಿದ್ದು ತೀರಾ ಇತ್ತೀಚಿನವರೆಗೆಕ್ಯೂಬಾದ ಸರಕಾರ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚು ಲೆಕೆಡಿಸಿಕೊಂಡಿರಲಿಲ್ಲ.

ಆದರೆ ಶನಿವಾರ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಹಲವಾರು ಅಧಿಕಾರಿಗಳು ತಮ್ಮ ಭಾಷಣದಲ್ಲಿ ಅಮೆರಿಕಾ ಈಗಲೂ ಕ್ಯೂಬಾವನ್ನು ತನ್ನ ಹಿಡಿತಕ್ಕೆ ತರಲು ಯತ್ನಿಸುತ್ತಿರುವ ದೇಶದ ವೈರಿಯೆಂದು ಅದರ ವಿರುದ್ಧ ಕೆಂಡ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News